ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಗೆ 13 ಬಲಿ (Suicide | Farah | Taliban | police)
Feedback Print Bookmark and Share
 
ಆಗ್ನೇಯ ಆಫ್ಘಾನಿಸ್ತಾನದಲ್ಲಿ ಮೋಟರ್‌‍ಸೈಕಲ್‌ನಲ್ಲಿ ಆಗಮಿಸಿದ ಆತ್ಮಾಹುತಿ ಬಾಂಬರ್ ಸ್ವತಃ ಸ್ಫೋಟಿಸಿಕೊಂಡಿದ್ದರಿಂದ ಪೊಲೀಸನೊಬ್ಬ ಸೇರಿದಂತೆ 13 ಜನರು ಹತರಾಗಿದ್ದಾರೆ. ಇರಾನ್ ಗಡಿಯಲ್ಲಿರುವ ಮರಳುಗಾಡು ಪ್ರಾಂತ್ಯ ಫರಾದಲ್ಲಿ ಈ ವರ್ಷ ಬಂಡುಕೋರರ ದಾಳಿಗಳು ತೀವ್ರತೆ ಪಡೆದಿದ್ದು, ಹೊಸ ಪ್ರದೇಶಗಳಲ್ಲಿ ತಾಲಿಬಾನಿಗಳು ಸಕ್ರಿಯರಾಗಿದ್ದಾರೆ.

ಹಮೀದ್ ಕರ್ಜೈ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಈ ದಾಳಿ ನಡೆದಿದೆ. ಹೆರಾಟ್ ಪ್ರಾಂತ್ಯಕ್ಕೆ ಒಯ್ಯಲು ಭಾರೀ ಟ್ರಕ್‌ಗಳಲ್ಲಿ ಸರಕುಗಳನ್ನು ತುಂಬುತ್ತಿದ್ದ ಸ್ಥಳದಲ್ಲಿ ಬಾಂಬರ್ ಸ್ಫೋಟಿಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಹತ್ತಾರು ಜನ ನಾಗರಿಕರ ಸ್ಥಿತಿ ಚಿಂತಾಜನಕವಾಗಿದ್ದು, ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂದು ಪ್ರಾಂತೀಯ ಗವರ್ನರ್ ತಿಳಿಸಿದ್ದಾರೆ. ಅಡಾ ಹೆರಾಟ್ ಪ್ರದೇಶದ ಫರಾ ನಗರ ಕೇಂದ್ರದಲ್ಲಿ ಮೋಟರ್‌ಸೈಕಲ್‌ನಲ್ಲಿ ಆಗಮಿಸಿದ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡ ಎಂದು ಫರಾ ಪೊಲೀಸ್ ಮುಖ್ಯಸ್ಥರ ಹೇಳಿಕೆ ಉಲ್ಲೇಖಿಸಿ ಎಎಫ್‌ಪಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ