ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಲ್ಲಾ ಓಮರ್‌ಗೆ ಐಎಸ್‌ಐ ಆಶ್ರಯ: ಅಮೆರಿಕ (America | ISI | Pakistan | Mulla Omar | Taliban)
Feedback Print Bookmark and Share
 
ತಾಲಿಬಾನ್ ಮುಖಂಡ ಓಮರ್ ಮುಲ್ಲಾ ಕ್ವೆಟ್ಟಾದಿಂದ ತಪ್ಪಿಸಿಕೊಂಡು ಕರಾಚಿಗೆ ತೆರಳಲು ಪಾಕಿಸ್ತಾನದ ಐಎಸ್‌ಐ ನೆರವು ನೀಡಿರುವುದು ಇದೀಗ ಬೆಳಕಿಗೆ ಬಂದಿದೆ.

ಅಫ್ಘಾನ್ ಮುಖಂಡನಾದ ಮುಲ್ಲಾನನ್ನು ಅಮೆರಿಕ ಸೇನೆ ಗುರಿಯಾಗಿರಿಸಿಕೊಂಡಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಐಎಸ್‌ಐ ಈ ನೆರವು ಚಾಚಿದೆ. ಇತ್ತೀಚೆಗೆ ಈತ ಕರಾಚಿ ನಗರದಲ್ಲಿ ಕಾಣಿಸಿಕೊಂಡಿದ್ದಾಗಿ ಅಮೆರಿಕ ಗುಪ್ತಚರ ಅಧಿಕಾರಿಗಳ ಮಾಹಿತಿ ಆಧರಿಸಿ ವಾಷಿಂಗ್ಟನ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದೆ.

ರಂಜಾನ್ ಮುಗಿದ ನಂತರ ಕಳೆದ ತಿಂಗಳು ಮುಲ್ಲಾ ಕರಾಚಿಗೆ ಪ್ರಯಾಣ ಬೆಳಿಸಿದ್ದು, ಅಲ್ಲಿ ನೂತನವಾಗಿ ಹಿರಿಯ ಮುಖಂಡರ ಮಂಡಳಿಯನ್ನು ರಚಿಸಿದ್ದಾನೆ ಎಂದು ಹೇಳಿದೆ. ಈ ಬೆಳವಣಿಗೆಯು ತಾಲಿಬಾನ್ ಉಗ್ರರನ್ನು ಸದೆಬಡಿಯುವ ಕೆಲಸದಲ್ಲಿ ಐಎಸ್‌ಐ ನೆರವಿನ ಮೇಲೆ ಸಂಶಯ ಹೆಚ್ಚು ಮಾಡಿದೆ. ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಪ್ರಭಾವ ಹೆಚ್ಚಿಸಲು 1990ರಲ್ಲಿ ತಾಲಿಬಾನಿಗಳನ್ನು ಐಎಸ್‌ಐ ಹುಟ್ಟು ಹಾಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ