ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಿಗ್ ಬ್ಯಾಂಗ್ ಪ್ರಯೋಗ ಮತ್ತೆ ಆರಂಭ (Big Bang | CERN | Atom | Nuclear)
Feedback Print Bookmark and Share
 
ತಾಂತ್ರಿಕ ತೊಂದರೆಗಳಿಂದ 2008 ಸೆಪ್ಟೆಂಬರ್‌ನಲ್ಲಿ ಆರಂಭವಾಗಿ ಸ್ಥಗಿತಗೊಂಡಿದ್ದ ವಿಶ್ವದ ಅತೀ ದೊಡ್ಡ ಮಹಾ ಸ್ಫೋಟ ಪ್ರಯೋಗ ಶುಕ್ರವಾರ ಮತ್ತೆ ಆರಂಭವಾಗಿದೆಯೆಂದು ಪರಮಾಣು ಸಂಶೋಧನೆಯ ಐರೋಪ್ಯ ಸಂಘಟನೆ ವಕ್ತಾರ ತಿಳಿಸಿದ್ದಾರೆ. ಉಪ ಅಣು ಕಣಗಳನ್ನು ತುಂಬುವ ಪ್ರಥಮ ಪರೀಕ್ಷೆಗಳು ಸಂಜೆ 4 ಗಂಟೆಗೆ ಆರಂಭವಾಗಿದೆಯೆಂದು ಸರ್ನ್ ವಕ್ತಾರ ಜೇಮ್ಸ್ ಗಿಲ್ಲೀಸ್ ತಿಳಿಸಿದ್ದಾರೆ.

27 ಕಿಮೀ ಉದ್ದದ ಸುರಂಗದಲ್ಲಿ ನಿರ್ಮಿಸಿದ ಹ್ಯಾಡ್ರನ್ ಕೊಲೈಡರ್ ಅರ್ಧ ಅಥವಾ ಪೂರ್ಣ ಸರ್ಕ್ಯೂಟ್‌ಗೆ ಸಾಕಾಗುವಷ್ಟು ಕಣಗಳನ್ನು ತುಂಬುವ ಪ್ರಕ್ರಿಯೆ ಸೆಕೆಂಡಿನ ಅಲ್ಪಭಾಗದಲ್ಲಿ ಮುಗಿಯಿತೆಂದು ಅವರು ಹೇಳಿದ್ದಾರೆ.

ಬ್ರಹ್ಮಾಂಡ ಸೃಷ್ಟಿ ಮತ್ತು ಬೌತವಸ್ತುವಿನ ಮ‌ೂಲಭೂತ ಸ್ವರೂಪದ ನಿಗೂಢತೆ ಬಯಲುಮಾಡುವುದು ಹ್ಯಾಡ್ರನ್ ಕೊಲೈಡರ್ ಪ್ರಯೋಗದ ಗುರಿಯಾಗಿದೆ. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ತಾಂತ್ರಿಕ ತೊಂದರೆಗಳಿಂದ ಯಂತ್ರ ಸ್ಥಗಿತಗೊಂಡಿತ್ತು.

ಎಲ್ಲವೂ ಎಣಿಸಿದಂತೆ ನಡೆಸದರೆ ಅನೇಕ ನಿಮಿಷಗಳ ಕಾಲ ಅಣುಕಣಗಳನ್ನು ನುಗ್ಗಿಸಲು ಯತ್ನಿಸುತ್ತೇವೆಂದು ಗಿಲ್ಲೀಸ್ ಹೇಳಿದ್ದಾರೆ. ತಾಂತ್ರಿಕ ತೊಂದರೆಗಳಿಂದ ಯಂತ್ರ ಸ್ಥಗಿತಗೊಂಡ ಬಳಿಕ, ಎಎಚ್‌ಸಿ ಬಿಡಿಭಾಗಗಳನ್ನು ಐದು ಟೆಟ್ರಾಎಲೆಕ್ಟ್ರಾನ್ ವೋಲ್ಟ್‌ಗಳಿಗೆ ಸಮನಾದ ಶಕ್ತಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಬ್ರಹ್ಮಾಂಡದ ಮ‌ೂಲದ ಬಗ್ಗೆ ಬೆಳಕು ಚೆಲ್ಲಲು ವಿನ್ಯಾಸಗೊಳಿಸಿದ ಈ ಯಂತ್ರವನ್ನು ನಿರ್ಮಿಸಲು ಸುಮಾರು 20 ವರ್ಷಗಳನ್ನು ತೆಗೆದುಕೊಂಡಿದ್ದು, 6 ಶತಕೋಟಿ ಸ್ವಿಸ್ ಫ್ರಾಂಕ್‌ಗಳು ಅಥವಾ 4.9 ಶತಕೋಟಿ ಡಾಲರ್ ವೆಚ್ಚವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ