ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿಯಲ್ಲಿ ತಾಲಿಬಾನ್ ನಾಯಕ ಮುಲ್ಲಾ ಓಮರ್ (Omar | Taliban | Karachi | Laden)
Feedback Print Bookmark and Share
 
ತಾಲಿಬಾನಿನ ಒಂಟಿ ಕಣ್ಣಿನ ನಾಯಕ ಮುಲ್ಲಾ ಮೊಹಮದ್ ಓಮರ್ ಪಾಕಿಸ್ತಾನ ಗುಪ್ತಚರ ಸೇವೆಯ ನೆರವಿನೊಂದಿಗೆ ಕರಾಚಿಯಲ್ಲಿ ವಾಸಿಸಿದ್ದಾನೆಂದು ವಾಷಿಂಗ್ಟನ್ ಟೈಮ್ಸ್ ತಿಳಿಸಿದೆ. 9/11 ದಾಳಿಗೆ ಸಂಚು ರೂಪಿಸಿದಾಗ ಒಸಾಮಾ ಬಿನ್ ಲಾಡೆನ್ ಮತ್ತಿತರ ಅಲ್ ಖಾಯಿದಾ ನಾಯಕರಿಗೆ ಆತಿಥ್ಯ ವಹಿಸಿದ ಮುಲ್ಲಾ ಓಮರ್ ಕ್ವೆಟ್ಟಾದಲ್ಲಿ ನೆಲೆಸಿದ್ದ.

ಆಫ್ಘನ್ ತಾಲಿಬಾನ್ ಶುರಾ ಅಥವಾ ಮಂಡಲಿಯು ಆಫ್ಘಾನಿಸ್ತಾನದಲ್ಲಿ ಅಮೆರಿಕದ ಆಕ್ರಮಣದ ಬಳಿಕ ಕಂದಹಾರ್‌ನಿಂದ ಕ್ವೆಟ್ಟಾದಲ್ಲಿ ನೆಲೆ ಸ್ಥಾಪಿಸಿಕೊಂಡಿತ್ತು.ರಮ್ಜಾನ್ ಪವಿತ್ರ ಮಾಸದ ಅಂತ್ಯದಲ್ಲಿ ಕಳೆದ ತಿಂಗಳು ಮುಲ್ಲಾ ಓಮರ್ ಕರಾಚಿಗೆ ಪ್ರಯಾಣ ಬೆಳೆಸಿದ ಎಂದು ಇಬ್ಬರು ಹಿರಿಯ ಅಮೆರಿಕ ಅಧಿಕಾರಿಗಳು ಮತ್ತು ಒಬ್ಬ ಮಾಜಿ ಹಿರಿಯ ಸಿಐಎ ಅಧಿಕಾರಿ ತಿಳಿಸಿದ್ದಾರೆ.

ಕರಾಚಿಯಲ್ಲಿ ಹೊಸ ಹಿರಿಯ ನಾಯಕತ್ವ ಮಂಡಳಿಯನ್ನು ಅವನು ಉದ್ಘಾಟಿಸಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಅಮೆರಿಕದ ವರದಿಗಳಿಂದ ಕಂಗೆಟ್ಟಿರುವುದಾಗಿ ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.ಅಮೆರಿಕದ ಡ್ರೋನ್ ದಾಳಿಗಳಿಗೆ ಈಡಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ತಾಲಿಬಾನ್ ನಾಯಕರಿಗೆ ಕ್ವೆಟ್ಟಾದಿಂದ ಸ್ಥಳಾಂತರಿಸಲು ಐಎಸ್‌ಐ ನೆರವಾಯಿತೆಂದು ಹೆಸರು ಹೇಳಲು ಬಯಸದ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ 1990ರಲ್ಲಿ ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪ್ರಭಾವ ವಿಸ್ತರಣೆಗೆ ತಾಲಿಬಾನ್ ಹುಟ್ಟಿಗೆ ನೆರವಾದ ಐಎಸ್‌ಐ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನಗಳನ್ನು ಹುಟ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ