ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೀಜಿಂಗ್‌ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಕ್ಕೆ 32 ಬಲಿ (Explosion | China | Work Safety | Mine)
Feedback Print Bookmark and Share
 
ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಅನಿಲ ಸ್ಫೋಟ ಸಂಭವಿಸಿದ್ದರಿಂದ 32 ಜನರು ಅಸುನೀಗಿದ್ದಾರೆ ಮತ್ತು ಸುಮಾರು 82 ಜನರು ಭೂಗತ ಗಣಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸ್ಫೋಟ ಸಂಭವಿಸಿದಾಗ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದ ಕ್ಸಿನ್‌ಕ್ಸಿಂಗ್ ಗಣಿಯಲ್ಲಿ ಒಟ್ಟು 528 ಜನರು ಜನರು ಕೆಲಸ ನಿರತರಾಗಿದ್ದರು ಎಂದು ಕಾರ್ಮಿಕ ಸುರಕ್ಷತೆ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಸ್ಫೋಟ ಸಂಭವಿಸಿದ ಬಳಿಕ 389 ಜನರು ಅಪಾಯದಿಂದ ಪಾರಾಗಿದ್ದಾರೆ.31 ಜನರು ಸ್ಫೋಟದಲ್ಲಿ ಸತ್ತಿದ್ದು, 26 ಜನರನ್ನು ಪಾರು ಮಾಡಲಾಗಿದೆ ಮತ್ತು ಇನ್ನೂ ಕೆಲವರು 500 ಮೀಟರ್ ಭೂಗತ ಗಣಿಯಲ್ಲಿ ಸಿಕ್ಕಿಬಿದ್ದಿದ್ದಾರೆಂದು ಚೀನಾ ಕೇಂದ್ರ ಟೆಲಿವಿಷನ್ ವರದಿ ಮಾಡಿದೆ. ಅನಿಲ ಶೇಖರಣೆಯಿಂದ ಸ್ಫೋಟ ಸಂಭವಿಸಿದೆಯಂದು ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ಗಣಿಗಳು ವಿಶ್ವದಲ್ಲೇ ಮಾರಕವೆನಿಸಿದ್ದು, ಅನಿಯಂತ್ರಿತ ನಿರ್ವಹಣೆಯಿಂದ ಗಣಿ ದುರಂತಗಳು ಸಂಭವಿಸುತ್ತಿವೆ.ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ವೈಫಲ್ಯವೇ ದುರಂತಗಳಿಗೆ ಕಾರಣವೆನ್ನಲಾಗಿದೆ. ವಾತಾಯನ ವ್ಯವಸ್ಥೆ ಅಥವಾ ಬೆಂಕಿ ನಿಯಂತ್ರಣ ಉಪಕರಣದ ಕೊರತೆಯ‌ೂ ದುರಂತಗಳಿಗೆ ಕಾರಣವೆಂದು ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಸ್ಫೋಟ, ಗಣಿ, ವಾತಾಯನ