ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ದಾಳಿಕೋರರಿಗೆ ಜೈಲುಶಿಕ್ಷೆಯಿಂದ ತೃಪ್ತಿಯ ಭಾವನೆಯಿಲ್ಲ' (Doctor | Haikerwal | Attacker | Australia)
Feedback Print Bookmark and Share
 
ತಮ್ಮ ವಿರುದ್ಧ ದಾಳಿಕೋರರಿಗೆ ವಿಧಿಸಿದ ಜೈಲುಶಿಕ್ಷೆಯ ಅವಧಿಗಳಿಂದ ತಮ್ಮ ಮನಸ್ಸಿನಲ್ಲಿ ತೃಪ್ತಿಯ ಭಾವನೆ ಮ‌ೂಡಿಲ್ಲವೆಂದು ಭಾರತೀಯ ಮ‌ೂಲದ ವೈದ್ಯ ಮತ್ತು ಆಸ್ಟ್ರೇಲಿಯ ವೈದ್ಯಕೀಯ ಮಂಡಳಿಯ ಮಾಜಿ ಮುಖ್ಯಸ್ಥ ಮುಖೇಶ್ ಹೈಕರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯ ಕಮಂಗಿಗಳು ಬೇಸ್‌ಬ್ಯಾಲ್ ಬ್ಯಾಟಿನಿಂದ ವೈದ್ಯರ ಮೇಲೆ ಹಲ್ಲೆ ಮಾಡಿದ್ದರಿಂದ ಅವರ ತಲೆಬುರುಡೆ ಒಡೆದು ಮೆದುಳಿನ ಚೂರು ತುಂಡಾಗಿದೆ.

ಮೆದುಳಿನ ಚೂರು ತುಂಡಾಗಿದ್ದರಿಂದ ಅವರು ನಡೆಯಲು ಮತ್ತು ಮಾತನಾಡಲು ಪುನಃ ಕಲಿಯಬೇಕಾದ ಸ್ಥಿತಿ ಉಂಟಾಗಿದೆ. 2008ರ ಸೆಪ್ಟೆಂಬರ್ 27ರಂದು ಐದು ಕಿಮೀ ವ್ಯಾಪ್ತಿಯೊಳಗೆ ವಿಲಿಯಂಸ್ಟೌನ್ ಪಾರ್ಕ್‌ನಲ್ಲಿ ಗುಂಪು ಗೌರವಾನ್ವಿತ ವೈದ್ಯರ ಮೇಲೆ ಹಲ್ಲೆ ನಡೆಸಿತ್ತು. ಹೈಕರ್‌ವಾಲ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿದ್ದು, 24 ಗಂಟೆಗಳವರೆಗೆ ಕೋಮಾ ಸ್ಥಿತಿಯಲ್ಲಿ ಇರಿಸಲಾಗಿತ್ತು.

ದಾಳಿಗೆ ಗುರಿಯಾದ ಬಳಿಕ ತೀವ್ರ ಗಾಯಗೊಂಡಿದ್ದ ಅವರು ಎರಡು ತಿಂಗಳ ಕಾಲ ಆಸ್ಪತ್ರೆವಾಸ ಮಾಡಿದ್ದರು. ಹೈಕರ್ವಾಲ್ ದಾಳಿಕೋರರು ಸುದೀರ್ಘಕಾಲದ ಜೈಲು ಶಿಕ್ಷೆಗೆ ಗುರಿಯಾಗಿದ್ದರೂ ತಮಗೆ ಆ ಶಿಕ್ಷೆ ಹಿತಕಾರಿಯಾಗಿಲ್ಲವೆಂದು ಅವರು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಸಮುದಾಯಕ್ಕೆ ರಕ್ಷಣೆ, ಸುರಕ್ಷತೆಯ ಭಾವನೆ ಮ‌ೂಡಿಸಬೇಕು, ಅವರ ಜೀವಕ್ಕೆ ಅಪಾಯದ ಭಾವನೆ ಇರಬಾರದೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ