ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿಗೆ ಹಣ: ಇಟಲಿಯಲ್ಲಿ ಇಬ್ಬರ ಬಂಧನ (Mumbai | Brescia | Terror | Italy)
Feedback Print Bookmark and Share
 
ಮುಂಬೈನಲ್ಲಿ ಕಳೆದ ವರ್ಷ ನಡೆದ ಭಯೋತ್ಪಾದನೆ ದಾಳಿಗಳಿಗೆ ತಾತ್ವಿಕ ಬೆಂಬಲ ನೀಡಿದ ಆರೋಪದ ಮೇಲೆ ಇಟಲಿಯ ಪೊಲೀಸರು ಶನಿವಾರ ಪಾಕಿಸ್ತಾನ ಮ‌ೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬ್ರೆಸ್ಕಿಯದಲ್ಲಿ ಮುಂಜಾನೆ ನಡೆದ ದಾಳಿಯಲ್ಲಿ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆಯೆಂದು ಉತ್ತರ ಇಟಲಿ ನಗರದ ಪೊಲೀಸರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಮುಂಬೈ ದಾಳಿಗಳಿಗೆ ಸಂಬಂಧಪಟ್ಟಂತೆ ಲಷ್ಕರೆ ತೊಯ್ಬಾಗೆ ಸಹಕರಿಸಿದ ಆರೋಪದ ಮೇಲೆ ಹೆಡ್ಲಿ ಮತ್ತು ರಾನಾ ಬಂಧನದ ಬಳಿಕ ಇವರಿಬ್ಬರ ಬಂಧನವಾಗಿದ್ದು, ಮುಂಬೈ ದಾಳಿಗಳಲ್ಲಿ ಭಾಗಿಯಾದ ಆರೋಪಿಗಳ ಸರಪಣಿ ಬಿಚ್ಚಿಕೊಳ್ಳುತ್ತಿದೆ. ಶಂಕಿತರು ಹಣ ವರ್ಗಾವಣೆ ಏಜನ್ಸಿಯನ್ನು ನಿರ್ವಹಿಸಿ, ನವೆಂಬರ್ 26ರ ದಾಳಿಗೆ ಆರ್ಥಿಕ ನೆರವು ಒದಗಿಸಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಾಳಿಗಳಿಗೆ ಮುಂಚಿನ ದಿನ ಮುಂಬೈ ದಾಳಿಕೋರರು ಮತ್ತು ಅವರ ಸಹಚರರು ಬಳಸಿದ ಇಂಟರ್‌ನೆಟ್ ಫೋನ್ ಖಾತೆಯನ್ನು ಸಕ್ರಿಯಗೊಳಿಸಲು ಅವರು ಹಣ ವರ್ಗಾಯಿಸಿದ್ದರೆಂದು ಭಯೋತ್ಪಾದನೆ ನಿಗ್ರಹ ಪೊಲೀಸ್ ಮುಖ್ಯಸ್ಥ ಸ್ಟಿಫಾನೊ ಫೊನ್ಜಿ ತಿಳಿಸಿದ್ದಾರೆ.

ಹಣವನ್ನು ಇಟಲಿಯಿಂದ ವರ್ಗಾಯಿಸಲಾಗಿತ್ತು ಎಂದು ಎಫ್‌ಬಿಐ ಎಚ್ಚರಿಸಿದ ಬಳಿಕ ಡಿಸೆಂಬರ್‌ನಲ್ಲಿ ಇಟಲಿ ಪೊಲೀಸರು ತನಿಖೆ ಆರಂಭಿಸಿದರೆಂದು ಎಪಿಗೆ ಫೋನ್ಜಿ ತಿಳಿಸಿದ್ದಾರೆ. ಇನ್ನೊಬ್ಬ ಪಾಕಿಸ್ತಾನಿ ವ್ಯಕ್ತಿಯ ಹೆಸರಿನಲ್ಲಿ ಈ ಹಣ ವರ್ಗಾಯಿಸಲಾಗಿದ್ದು, ಆ ವ್ಯಕ್ತಿಯು ಇಟಲಿಯಲ್ಲೇ ಇರಲಿಲ್ಲ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲವೆಂದು ಅವರು ಹೇಳಿದ್ದಾರೆ.

ಇವರಿಬ್ಬರು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ನೆರವು ಮತ್ತು ಕುಮ್ಮಕ್ಕು ಹಾಗೂ ಅಕ್ರಮ ಹಣಕಾಸು ಚಟುವಟಿಕೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ. ಬೇರೆಯವರ ಗುರುತಿನ ಹೆಸರಿನಲ್ಲಿ ಹಣ ವರ್ಗಾಯಿಸುವುದು ಬ್ರೆಸ್ಕಿಯ ಏಜನ್ಸಿಯಲ್ಲಿ ಸಾಮಾನ್ಯ ಅಭ್ಯಾಸವಾಗಿದೆಯೆಂದು ಫೋನ್ಜಿ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ, ಇಟಲಿ, ಬ್ರೆಸ್ಕಿಯ, ಅಮೆರಿಕ