ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಮಿಳು ನಿರಾಶ್ರಿತರಿಗೆ ಮುಂದಿನ ತಿಂಗಳು ವಿಮೋಚನೆ (Sri Lanka | Tamil Tiger | Camps | Refugee)
Feedback Print Bookmark and Share
 
ಎಲ್‌ಟಿಟಿಇ ಜತೆ ಸೇನೆಯ ಹೋರಾಟದಲ್ಲಿ ಸಂತ್ರಸ್ತರಾಗಿ ಸರ್ಕಾರದ ವಿಶೇಷ ಶಿಬಿರದಲ್ಲಿ ವಾಸಿಸುತ್ತಿರುವ ಜನರು ಮುಂದಿನ ತಿಂಗಳು ಶಿಬಿರದಿಂದ ಮುಕ್ತವಾಗಿ ಹೊರಹೋಗಬಹುದು. ಅಂತರ್ಯುದ್ಧದ ಅಂತಿಮ ಹಂತಗಳಲ್ಲಿ ತಪ್ಪಿಸಿಕೊಳ್ಳುತ್ತಿದ್ದ ತಮಿಳರಿಗೆ ಉತ್ತರದಲ್ಲಿ ಶಿಬಿರಗಳನ್ನು ಸ್ಥಾಪಿಸಿ ಅಲ್ಲಿ ಬಲವಂತವಾಗಿ ಇರಿಸಲಾಗಿತ್ತು.

ಜನರ ಇಚ್ಛೆಗೆ ವಿರುದ್ಧವಾಗಿ ಶಿಬಿರಗಳಲ್ಲಿ ಜನರನ್ನು ಇರಿಸಿರುವ ಬಗ್ಗೆ ಶ್ರೀಲಂಕಾ ಸರ್ಕಾರ ತೀವ್ರ ಅಂತಾರಾಷ್ಟ್ರೀಯ ಟೀಕೆಗೆ ಗುರಿಯಾಗಿತ್ತು. ಅಧ್ಯಕ್ಷ ಮಹೀಂದ ರಾಜಪಕ್ಷ ವಿಶೇಷ ಸಲಹೆಗಾರರಾದ ಅವರ ಸೋದರ ಬಾಸಿಲ್ ಸಂತ್ರಸ್ತರ ದೊಡ್ಡ ಶಿಬಿರವಾದ ಮೆನಿಕ್ ಫಾರ್ಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಬಿರದಿಂದ ಹೊರಹೋಗುವವರಿಗೆ ಮುಕ್ತವಾಗಿ ಬಿಡುಗಡೆ ಮಾಡುವ ಪ್ರಕಟಣೆ ಹೊರಡಿಸಿದ್ದಾರೆ.

ಕೆಲವು ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿ.1ರಿಂದ ಸಂತ್ರಸ್ತರ ಶಿಬಿರಗಳು ಮುಚ್ಚಿದ ಸ್ಥಳಗಳಾಗಿರದೇ, ಜನರು ಮುಕ್ತವಾಗಿ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಬಹುದು. ಜನವರಿಯೊಳಕ್ಕೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸರ್ಕಾರದ ಪ್ರತಿಜ್ಞೆಯನ್ನು ಅವರು ಪುನರುಚ್ಚರಿಸಿದರು. ಮಿಲಿಟರಿಯು ತಮಿಳು ಬಂಡುಕೋರರನ್ನು ನುಚ್ಚುನೂರು ಮಾಡಿದ ಬಳಿಕ ಯುದ್ಧಪೀಡಿತ ಪ್ರದೇಶದಲ್ಲಿ ಸಂತ್ರಸ್ತರಿಗೆ ಆತುರಾತುರವಾಗಿ ಶಿಬಿರಗಳನ್ನು ನಿರ್ಮಿಸಲಾಗಿತ್ತು.

ನಿರಾಶ್ರಿತರನ್ನು ವಶಕ್ಕೆ ತೆಗೆದುಕೊಂಡು ಉಗ್ರಗಾಮಿಗಳ ಜತೆ ನಂಟಿನ ಬಗ್ಗೆ ತನಿಖೆ ನಡೆಸಿ, ಉತ್ತರದಲ್ಲಿ ನೆಲಬಾಂಬ್‌ಗಳಿಂದ ಪ್ರದೇಶವನ್ನು ಮುಕ್ತಗೊಳಿಸಲಾಗಿತ್ತು. ಶಿಬಿರದ ಸುತ್ತ ಮುಳ್ಳಿನ ಬೇಲಿ ಹಾಕಲಾಗಿದ್ದು, ಅನೇಕ ಮಂದಿ ಸಂತ್ರಸ್ತರು ಕಳಪೆ ಆಹಾರ ಮತ್ತು ಅನೈರ್ಮಲ್ಯದ ಸ್ಥಿತಿಗತಿ ಬಗ್ಗೆ ದೂರು ಸಲ್ಲಿಸಿದ್ದರು. ಸಂತ್ರಸ್ತರ ತಪಾಸಣೆ ಪರಿಸ್ಥಿತಿ ಪಾರದರ್ಶಕವಾಗಿಲ್ಲವೆಂದು ವಿಶ್ವಸಂಸ್ಥೆ, ರಾಜತಾಂತ್ರಿಕರು ಮತ್ತು ದತ್ತಿಸಂಸ್ಥೆಗಳು ದೂರಿವೆ.
ಸಂಬಂಧಿತ ಮಾಹಿತಿ ಹುಡುಕಿ