ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕ್ಯೂಬಾಗೆ ಬೇಹುಗಾರಿಕೆ: ಅಮೆರಿಕ ದಂಪತಿಗೆ ಜೈಲು (Retire | Cuba | Official | Myers)
Feedback Print Bookmark and Share
 
ಸುಮಾರು 3 ದಶಕಗಳ ಕಾಲ ಕ್ಯೂಬಾ ಪರವಾಗಿ ಬೇಹುಗಾರಿಕೆ ಮಾಡಿದ್ದಾಗಿ ಅಮೆರಿಕದ ವಿದೇಶಾಂಗ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಅವರ ಪತ್ನಿ ಒಪ್ಪಿಕೊಂಡಿದ್ದಾರೆ. ಸರ್ಕಾರದ ಅತ್ಯುಚ್ಚ ಗೋಪ್ಯತೆ ವಿಷಯಗಳನ್ನು ಮಾಜಿ ಅಧಿಕಾರಿ 72 ವರ್ಷ ವಯಸ್ಸಿನ ಕೆಂಡಾಲ್ ಮೈಯರ್ಸ್ ಕ್ಯೂಬಾಗೆ ಬಯಲು ಮಾಡಿದ್ದರು.

ಕ್ಯೂಬಾಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ತಮ್ಮ ಜೀವಿತದ ಅವಧಿಯನ್ನು ಜೈಲಿನಲ್ಲಿ ಕಳೆಯಲಿದ್ದು, ಅವರ ಪತ್ನಿ ಗ್ವೆಂಡೊಲಿನ್ ಏಳೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದಾರೆ.ಕ್ಯೂಬಾಗೆ ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಸಂಗ್ರಹಿಸಿ, ವಿತರಿಸಿದ ಪಿತೂರಿಯನ್ನು ದಂಪತಿ ಒಪ್ಪಿಕೊಂಡಿದ್ದು, ವಾಷಿಂಗ್ಟನ್ ಡಿಸಿಯ ಅಪಾರ್ಟ್‌ಮೆಂಟ್ ಸೇರಿದಂತೆ 37 ಅಡಿ ಉದ್ದದ ದೋಣಿ ಸೇರಿದಂತೆ 1.7 ದಶಲಕ್ಷ ಡಾಲರ್ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಒಪ್ಪಿದ್ದಾರೆ.

ಎಫ್‌ಬಿಐನ ಕುಟುಕು ಕಾರ್ಯಾಚರಣೆಯಿಂದ ಕಳೆದ ಜೂನ್‌ನಲ್ಲಿ ಬಂಧಿತರಾದ ಬಳಿಕ ಅವರು ಕಸ್ಟಡಿಯಲ್ಲಿದ್ದಾರೆ. ಕಳೆದ 30 ವರ್ಷಗಳಿಂದ ಈ ದಂಪತಿ ಅಮೆರಿಕದ ನಂಬಿಕೆ ದ್ರೋಹ ಮಾಡಿ ಗೋಪ್ಯ ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಕ್ಯೂಬಾ ಸರ್ಕಾರಕ್ಕೆ ರವಾನಿಸುತ್ತಿದ್ದರೆಂದು ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ