ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ, ರಾನಾ ನಂಟು ಹೊಂದಿದ್ದ ಪಾಕಿಸ್ತಾನಿಯ ತನಿಖೆ (Geneva | Rana | Headley | Mumbai)
Feedback Print Bookmark and Share
 
ಅಮೆರಿಕದಲ್ಲಿ ಸೆರೆಸಿಕ್ಕಿರುವ ಎಲ್‌ಇಟಿ ಕಾರ್ಯಕರ್ತರಾದ ಡೇವಿಡ್ ಕಾಲ್ಮನ್ ಹೆಡ್ಲಿ ಮತ್ತು ತಹವರ್ ಹುಸೇನ್ ರಾನಾ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದನೆಂದು ಶಂಕಿಸಲಾದ ಪಾಕಿಸ್ತಾನಿ ಪೌರನನೊಬ್ಬನನ್ನು ಅಮೆರಿಕದ ತನಿಖೆದಾರರು ತನಿಖೆಗೆ ಒಳಪಡಿಸಿದ್ದಾರೆ. ಇದರಿಂದಾಗಿ ಹೆಡ್ಲಿ ಮತ್ತು ರಾನಾ ಅವರು ಮುಂಬೈ ದಾಳಿಗಳಲ್ಲಿ ಭಾಗಿಯಾದ ಬಗ್ಗೆ ಭಾರತಕ್ಕೆ ಇನ್ನೊಂದು ವಾರದಲ್ಲಿ ಮಾಹಿತಿ ಸಿಗುವುದೆಂದು ನಿರೀಕ್ಷಿಸಲಾಗಿದೆ.

ಐಎಸ್‌ಐನ ಕೆಲವು ಶಕ್ತಿಗಳು ಹೆಡ್ಲಿ ಜತೆ ನಂಟು ಹೊಂದಿರಬಹುದೆಂದು ಅಮೆರಿಕ ಶಂಕಿಸಿದ್ದು, ಹೆಡ್ಲಿ ಮತ್ತು ರಾನಾ ಮುಂಬೈ ದಾಳಿಗಳಲ್ಲಿ ಭಾಗಿಯಾಗಿರಬಹುದೆಂದು ಭಾರತದಲ್ಲಿ ಗುಪ್ತಚರ ಸಂಸ್ಥೆಗಳು ಸಂಶಯಿಸಿವೆ. ಆದರೆ 26/11 ದಾಳಿಗಳ ಜತೆ ಇವರಿಬ್ಬರ ನಂಟು ಕಲ್ಪಿಸುವ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆಂದು ಮ‌ೂಲಗಳು ಹೇಳಿವೆ.

ಹೆಡ್ಲಿ ಪ್ರಕರಣದ ಬಗ್ಗೆ ಭಾರತ ಮತ್ತು ಅಮೆರಿಕ ಸತತ ಸಂಪರ್ಕದಲ್ಲಿದ್ದು, ಅವರಿಬ್ಬರು 26/11 ದಾಳಿಗಳಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಒಂದು ವಾರದೊಳಗೆ ಸಿಗಲಿದೆಯೆಂದು ಅಮೆರಿಕ ತಿಳಿಸಿರುವುದಾಗಿ ಮ‌ೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಹೆಡ್ಲಿ, ರಾನಾ, ಐಎಸ್ಐ