ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುಮಾತ್ರದಲ್ಲಿ 269 ಜನರಿದ್ದ ಹಡಗು ನೀರುಪಾಲು (Indonesia | Sumatra | Dumai | Ferry)
Feedback Print Bookmark and Share
 
ಇಂಡೊನೇಶಿಯ ಸುಮಾತ್ರದಲ್ಲಿ ಭಾನುವಾರ ಕೆಟ್ಟ ಹವೆಯಿಂದ ಸಮುದ್ರದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ 269 ಪ್ರಯಾಣಿಕರನ್ನು ಒಯ್ಯುತ್ತಿದ್ದ ಹಡಗು ಮುಳುಗಿದ ದುರಂತ ಸಂಭವಿಸಿದೆ. ಡುಮೈ ಎಕ್ಸ್‌ಪ್ರೆಸ್ ಹಡಗು ಬಟಾಂ ದ್ವೀಪದಿಂದ ಪೆಕಾಂಬರು ದ್ವೀಪದತ್ತ ತೆರಳುತ್ತಿದ್ದಾಗ, ಸಿಂಗಪುರದ ಬಳಿಕ ಕರಿಮುನ್ ದ್ವೀಪದ ಬಳಿಕ ಬೆಳಿಗ್ಗೆ 10 ಗಂಟೆಗೆ ಮುಳುಗಿದೆ.

ಸುಮಾರು 226ರಿಂದ 269 ಮಂದಿ ಹಡಗಿನಲ್ಲಿದ್ದರು ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಹತಾಶ ಯತ್ನ ನಡೆಸಲಾಗಿದ್ದು, ಎಷ್ಟು ಜನರನ್ನು ರಕ್ಷಿಸಲಾಗಿದೆ ಮತ್ತು ಎಷ್ಟು ಜನರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆನ್ನುವುದು ಖಚಿತವಾಗಿಲ್ಲ.ಹಡಗಿನ ಪ್ರಯಾಣಿಕರ ಪಟ್ಟಿಯಲ್ಲಿ 213 ಜನರು ಪ್ರಯಾಣಿಕರು ಕ್ಯಾಪ್ಟನ್ ಸೇರಿದಂತೆ 13 ಸಿಬ್ಬಂದಿಯೆಂದು ದಾಖಲಾಗಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಇನ್ನೂ ಅನೇಕ ಮಂದಿ ನೀರಿನಲ್ಲಿ ತೇಲುತ್ತಿದ್ದು, ಅವರನ್ನು ಆದಷ್ಟು ಬೇಗ ರಕ್ಷಿಸಲು ಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.ಭಾರೀ ಮಳೆ ಮತ್ತು ನೀರಿನ ಉಬ್ಬರದಿಂದಾಗಿ ದುರಂತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ರಕ್ಷಣಾ ಪ್ರಯತ್ನಗಳು ಮುಂದುವರಿದಿವೆ. ಹಡಗಿನಿಂದ ಸಾಮರ್ಥ್ಯ ಮೀರಿ ಜನರನ್ನು ತುಂಬಿದ್ದರಿಂದ ಮುಳುಗಿಯೆಂಬ ಊಹಾಪೋಹವನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಕೆಟ್ಟ ಹವೆಯಿಂದ ಮುಳುಗಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಂಡೊನೇಶಿಯ, ಸುಮಾತ್ರ, ಬಟಾಂ