ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 18ರ ಬಾಲಕನಿಂದ ಭಾರತೀಯ ಮ‌ೂಲದ ಮಹಿಳೆ ಹತ್ಯೆ (London | British | London | Harpreet)
Feedback Print Bookmark and Share
 
ಭಾರತೀಯ ಮ‌ೂಲದ ಬ್ರಿಟನ್ ಮಹಿಳೆಯನ್ನು ಅಪ್ರಾಪ್ತ ವಯಸ್ಕ ಭಾರತೀಯ ಮ‌ೂಲದ ಬಾಲಕ ಹತ್ಯೆ ಮಾಡಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಸೌತಾಲ್ ನಿವಾಸಿಯಾದ 18 ವರ್ಷ ಪ್ರಾಯದ ಭಾರತೀಯ ಮ‌ೂಲದ ಶೇರ್‌ಸಿಂಗ್ ಎಂಬವನ ವಿರುದ್ಧ ಗೀತಾ ಔಲಕ್ ಅವರನ್ನು ಹತ್ಯೆ ಮಾಡಿದ ಆರೋಪವನ್ನು ಹೊರಿಸಲಾಗಿದ್ದು, ನಾಳೆ ಅವರು ಈಲಿಂಗ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಬ್ರಿಟನ್ ಪ್ರೆಸ್ ಒಕ್ಕೂಟ ವರದಿ ಮಾಡಿದೆ.

ಇಬ್ಬರು ಮಕ್ಕಳ ತಾಯಿಯಾದ ಭಾರತೀಯ ಮ‌ೂಲದ ಬ್ರಿಟನ್ ಮಹಿಳೆ ತಲೆಯಲ್ಲಿ ತೀವ್ರ ಗಾಯಗಳಿಂದ ಮೃತರಾಗಿ ನಜ್ಜುಗುಜ್ಜಾದ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ ಒಂದು ವಾರದ ಬಳಿಕ ಆರೋಪಿ ಪತ್ತೆಯಾಗಿದ್ದಾನೆ. ಈ ಹತ್ಯೆಗೆ ಸಂಬಂಧಪಟ್ಟಂತೆ ಔಲಕ್ ಪತಿ ಹರ್‌ಪ್ರೀತ್ ಸೇರಿ 11 ಜನರನ್ನು ಬಂಧಿಸಲಾಗಿತ್ತು. ಶೇರ್ ಸಿಂಗ್ ವಿರುದ್ಧ ಆರೋಪ ಹೊರಿಸಿದ ಬಳಿಕ ಉಳಿದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಸೋಮವಾರ ಸಂಜೆ ಸನ್‌ರೈಸ್ ರೇಡಿಯೊದಲ್ಲಿ ತಮ್ಮ ಕೆಲಸ ಮುಗಿಸಿ ಮಕ್ಕಳನ್ನು ಕರೆತರಲು ಔಲಕ್ ತೆರಳಿದ್ದಾಗ ಶಿಶುಪಾಲಿಕೆಯ ಮನೆಯ ಮುಂದಿನ ಬಾಗಿಲಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಆಕೆಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೈಯೊಂದನ್ನು ಕತ್ತರಿಸಿ ಹಾಕಲಾಗಿತ್ತು. ಆಸ್ಪತ್ರೆಗೆ ಸೇರಿಸಿದರೂ ನಾಲ್ಕು ಗಂಟೆಗಳ ಬಳಿಕ ಸತ್ತಿದ್ದಾರೆಂದು ಘೋಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ