ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪುತ್ರಿ ಜನಿಸಿದಾಗ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಗಗನಯಾನಿ (Bresnik | Baby daughter | NASA | Astronaut)
Feedback Print Bookmark and Share
 
ಗಗನಯಾನಿ ರಾನ್ಡೋಲ್ಫ್ ಬ್ರೆಸ್ನಿಕ್ ಬಾಹ್ಯಾಕಾಶದಲ್ಲಿ 355 ಕಿಮೀ ಎತ್ತರದಲ್ಲಿ ತೇಲುತ್ತಿರುವಾಗಲೇ ಅವರ ಪತ್ನಿಗೆ ಜನಿಸಿದ ನವಜಾತ ಪುತ್ರಿಯನ್ನು ಜಗತ್ತಿಗೆ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಬ್ರೆಸ್ನಿಕ್ ತಮ್ಮ ಪ್ರಥಮ ಬಾಹ್ಯಾಕಾಶ ಯಾತ್ರೆಯಂದು ಪ್ರಥಮ ಬಾಹ್ಯಾಕಾಶ ನಡಿಗೆ ಬಳಿಕ ಅಬಿಗೇಲ್ ಜನಿಸಿದ್ದಾಳೆ.

ಮಗು ಜನನದ ಸಂದರ್ಭದಲ್ಲಿ ಆಸ್ಪತ್ರೆಯ ಜನನ ಕೋಣೆಯ ಬಳಿ ಇರಬೇಕಾಗಿದ್ದ ನಾಸಾ ಗಗನಯಾನಿ ಬಾಹ್ಯಾಕಾಶದ ಕಕ್ಷೆಯಲ್ಲಿದ್ದದ್ದು ಇತಿಹಾಸದಲ್ಲಿ ಎರಡನೇ ಬಾರಿಯೆನ್ನಲಾಗಿದೆ.

ಕಳೆದ ರಾತ್ರಿ 11.04 ಗಂಟೆಗೆ ಅಬಿಗೇಲ್ ಮೇ ಬ್ರೆಸ್ನಿಕ್ ನಾಸಾ ಕುಟುಂಬಕ್ಕೆ ಸೇರಿಕೊಂಡಿತು ಎಂದು ಬ್ರೆಸ್ನಿಕ್ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭಾನುವಾರ ಬೆಳಿಗ್ಗೆ ತಮಗೆ ಪುತ್ರಿ ಜನಿಸಿದ ವಿಷಯವನ್ನು ಪ್ರಕಟಿಸಿದರು.ರ‌್ಯಾಂಡೋಲ್ಪ್ ಮತ್ತು ರೆಬೆಕಾ ಬ್ರೆಸ್ನಿಕ್ ಉಕ್ರೇನ್‌ನಲ್ಲಿ ಒಂದು ವರ್ಷದ ಹಿಂದೆ ಬಾಲಕನೊಬ್ಬನನ್ನು ದತ್ತು ತೆಗೆದುಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ