ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಪಾಯದಲ್ಲಿ ಪಾಕಿಸ್ತಾನ ಅಣ್ವಸ್ತ್ರ ಶಸ್ತ್ರಾಗಾರ (Pakistan | Hadley | Bush | Washington)
Feedback Print Bookmark and Share
 
ತಾಲಿಬಾನ್ ಭಯೋತ್ಪಾದಕತೆ ಮತ್ತು ನೆರೆಯ ಆಫ್ಘಾನಿಸ್ತಾನದಲ್ಲಿ ಸಮರವು ಪಾಕಿಸ್ತಾನದ ಅಣ್ವಸ್ತ್ರ ಶಸ್ತ್ರಾಗಾರವನ್ನು ಅಪಾಯದಲ್ಲಿರಿಸಿದ್ದು, ತೊಂದರೆಯ ಪರಿಸ್ಥಿತಿ ಉದ್ಭವಿಸಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಶಸ್ತ್ರಾಸ್ತ್ರ ನಿಯಂತ್ರಣ ತಜ್ಞ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ.

ಸರ್ಕಾರವೇನಾದರೂ ಯಾವುದಾದರೂ ಒಂದು ರೀತಿಯಲ್ಲಿ ಚೂರುಚೂರಾದರೆ ಪಾಕಿಸ್ತಾನದ ಅಣ್ವಸ್ತ್ರಗಳ ಗತಿ ಏನಾಗುತ್ತದೆಂಬ ಬಗ್ಗೆ ಅಪಾರ ಆತಂಕ ಕವಿದಿದೆಯೆಂದು ಹ್ಯಾಲಿಫೆಕ್ಸ್‌ನಲ್ಲಿ ಅಂತಾರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಅವರು ತಿಳಿಸಿದರು.

2001ರ ಸೆಪ್ಟೆಂಬರ್ ದಾಳಿ ಬಳಿಕ ಆಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಯಿಂದ ಪಾಕಿಸ್ತಾನವನ್ನು ಅಸ್ಥಿರಗೊಳಿಸಿ ತಾಲಿಬಾನ್ ಸರ್ಕಾರ ಸ್ಥಾಪನೆಗೆ ದಾರಿಯಾಗಬಹುದು ಎಂದು ಬುಷ್ ಆಡಳಿತದಲ್ಲಿ ಆತಂಕದ ಛಾಯೆ ಕವಿದಿತ್ತು ಎಂದು ಹ್ಯಾಡ್ಲಿ ಹೇಳಿದ್ದಾರೆ. ಇಲ್ಲಿವರೆಗೆ ಹಾಗೆ ಸಂಭವಿಸದೇ, ಸುಸ್ಥಿರ ಸರ್ಕಾರದ ನಿಯಂತ್ರಣದಲ್ಲಿ ಪಾಕ್ ಅಣ್ವಸ್ತ್ರಗಳು ಭದ್ರವಾಗಿವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ