ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಕ್ಸನ್ ಕೈಗವಸು 350,000 ಡಾಲರ್‌ಗೆ ಹರಾಜು (Jackson | Moonwalk | Dance | Glove)
Feedback Print Bookmark and Share
 
ಪ್ರಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ 1983ರಲ್ಲಿ ಮ‌ೂನ್‌ವಾಕ್ ನೃತ್ಯ ಮಾಡುವಾಗ ಧರಿಸಿದ್ದ ಬಿಳಿ ಕೈಗವಸು 350,000 ಡಾಲರ್ ಪ್ಲಸ್ ತೆರಿಗೆಗಳಿಗೆ ಹರಾಜಾಗಿದೆ. ಹರಾಜಿನಲ್ಲಿ ಗೆದ್ದ ಬಿಡ್‌ದಾರ ಹಾಂಕಾಂಗ್‌ನ ಹಾಫ್‌‍ಮನ್ ಮಾ ತೆರಿಗೆ ಮತ್ತು ಶುಲ್ಕ ಸೇರಿದಂತೆ 420,000 ಡಾಲರ್ ಪಾವತಿ ಮಾಡಿ ಕೈಗವಸಿನ ಒಡೆತನ ಹೊಂದಲಿದ್ದಾರೆ.

ಮೋಟೌನ್ 25ನೇ ವಾರ್ಷಿಕದಂದು ಟಿವಿ ಸ್ಪೆಷಲ್ ಮ‌ೂನ್‌ವಾಕ್ ನೃತ್ಯದಲ್ಲಿ ಜಾಕ್ಸನ್ ನವೀಕೃತ ಗಾಲ್ಫ್ ಕೈಗವಸು ಧರಿಸಿದ್ದ. ಟೈಮ್ಸ್ ಸ್ಕ್ವೇರ್ ಹಾರ್ಡ್ ರಾಕ್ ಕೆಫೆಯಲ್ಲಿ ಜಾಕ್ಸನ್ ಸ್ಮರಣೀಯ ವಸ್ತುಗಳ ಸಂಗ್ರಹದಲ್ಲಿ ಕೈಗವಸು ಅಗ್ರ ವಸ್ತುವಾಗಿತ್ತು. ಇದರ ಪೂರ್ವ ಹರಾಜಿನ ಅಂದಾಜು 40ರಿಂದ 60,000 ಡಾಲರ್ ಎಂದು ಲೆಕ್ಕಹಾಕಲಾಗಿತ್ತು.

ಜೂನ್ 25ರಂದು ಮೃತರಾದ ಪಾಪ್ ಕಣ್ಮಣಿ ಜಾಕ್ಸನ್ ಕೊಮ್ಮೋಡೋರ್ಸ್ ಹಾಡುಗಾರಿಕೆ ಸಮ‌ೂಹ ವಾಲ್ಟರ್ ಕ್ಲೈಡ್ ಆರೆಂಜ್ ಅವರಿಗೆ ಕೈಗವಸು ನೀಡಿದ್ದರು. ಜಾಕ್ಸನ್ 1989ಲ್ಲಿ ಬ್ಯಾಡ್ ಟೂರ್ ಸಂದರ್ಭದಲ್ಲಿ ಧರಿಸಿದ್ದ ಜ್ಯಾಕೆಟ್, 225.000 ಡಾಲರ್ ಗಳಿಸಿತ್ತು.

ಅದರ ಹರಾಜಿನ ಅಂದಾಜು 8,000 ಡಾಲರ್‌ಗಿಂತ 20 ಪಟ್ಟು ಹಣವನ್ನು ಹರಾಜಿನಲ್ಲಿ ಸಂಪಾದಿಸಿತ್ತು.ಲಾಸ್ ಏಂಜಲ್ಸ್ ಮ‌ೂಲದ ಜೂಲಿಯನ್ ಆಕ್ಷನ್ಸ್ ಹರಾಜುಗಳಲ್ಲಿ ಜಾಕ್ಸನ್ ಮ‌ೂನ್‌ವಾಕ್ ನೃತ್ಯ ಮಾಡುವ ಸಂದರ್ಭದಲ್ಲಿ ಧರಿಸಿದ್ದ ಹ್ಯಾಟ್ ಕೂಡ ಸೇರಿದ್ದು, ಅದು 22,000 ಡಾಲರ್‌ಗೆ ಮಾರಾಟವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ