ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟಾಯ್ಲೆಟ್‌ನ ಕಪಾಟಿನಲ್ಲಿ ಡಾರ್ವಿನ್ ಪುಸ್ತಕ ಪತ್ತೆ (Darwin | Species | England | Auction)
Feedback Print Bookmark and Share
 
ಚಾರ್ಲ್ಸ್ ಡಾರ್ವಿನ್ ಅವರ 'ಜೀವಿಗಳ ಮ‌ೂಲ' ಎಂಬ ಅಪರೂಪದ ಪ್ರಥಮ ಸಂಚಿಕೆಯು ದಕ್ಷಿಣ ಇಂಗ್ಲೆಂಡ್‌ನ ಕುಟುಂಬವೊಂದರ ಅತಿಥಿ ಶೌಚಾಲಯದಲ್ಲಿ ಸಿಕ್ಕಿದ್ದು, ಅದನ್ನು ಹರಾಜು ಹಾಕುವುದಾಗಿ ಹರಾಜು ಸಂಸ್ಥೆಯೊಂದು ತಿಳಿಸಿದೆ. 1859ರಲ್ಲಿ ಮೊಟ್ಟಮೊದಲು ಮುದ್ರಣವಾದ 1250 ಪ್ರತಿಗಳಲ್ಲಿ ಒಂದಾದ ಪುಸ್ತಕವು ಆಕ್ಸ್‌ಫರ್ಡ್ ಮನೆಯೊಂದರ ಟಾಯ್ಲೆಟ್‌ನಲ್ಲಿನ ಪುಸ್ತಕದ ಕಪಾಟಿನಲ್ಲಿ ಸಿಕ್ಕಿರುವುದಾಗಿ ಕ್ರಿಸ್ಟೀ ಹರಾಜು ಮನೆ ತಿಳಿಸಿದೆ.

ಪುಸ್ತಕವನ್ನು ಅದರ ಪ್ರಕಟಣೆಯ 150ನೇ ವಾರ್ಷಿಕವಾದ ಮಂಗಳವಾರ ಹರಾಜು ಹಾಕಲಾಗುವುದು. ಪುಸ್ತಕವು 60,000 ಡಾಲರ್‌ಗೆ ಮಾರಾಟವಾಗುವ ಸಂಭವವಿದೆ. ಡಾರ್ವಿನ್ ಅವರು ಒರಿಜಿನ್ ಆಫ್ ಸ್ಪೆಸೀಸ್ ಪುಸ್ತಕವು ವಿಕಾಸವಾದದ ಆಧುನಿಕ ತಿಳುವಳಿಕೆಗೆ ಅಡಿಪಾಯವಾದ ನಿಸರ್ಗದ ರೂಪಾಂತರ ಸಿದ್ಧಾಂತದ ರೂಪುರೇಷೆಯನ್ನು ನೀಡುತ್ತದೆ.

ಡಾರ್ವಿನ್ 200ನೇ ಜನ್ಮವಾರ್ಷಿಕವನ್ನು ಜಗತ್ತಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಡಾರ್ವಿನ್ ಸಮೃದ್ಧ ವಿಷಯಗಳ ಲೇಖಕರಾಗಿದ್ದು, ವಿಕಾಸವಾದದ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುವ ಮುನ್ನ ಅವರು 'ವಾಯೇಜ್ ಆಫ್ ಬೀಗಲ್' ಲೇಖಕರಾಗಿ ಖ್ಯಾತಿ ಗಳಿಸಿದ್ದು, ಭೂವಿಜ್ಞಾನಿಯಾಗಿ ದಕ್ಷಿಣ ಅಮೆರಿಕದಲ್ಲಿ ವ್ಯಾಪಕ ಪ್ರಕಟಣೆಗಳನ್ನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ