ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಜಾಪ್ರಭುತ್ವ ವಿರೋಧಿ ಹಾದಿ ಭಾರತ ತುಳಿಯುವುದಿಲ್ಲ' (China | Singh | India | US)
Feedback Print Bookmark and Share
 
ಚೀನಾದಿಂದ ಇತ್ತೀಚೆಗೆ ನಿಶ್ಚಿತ ಪ್ರಮಾಣದ ಆಕ್ರಮಣಕಾರಿ ಮನೋಭಾವ ವ್ಯಕ್ತವಾಗಿದ್ದು, ಭಾರತ ಆ ರೀತಿಯ ಪ್ರಜಾಪ್ರಭುತ್ವ ವಿರೋಧಿ ಮಾರ್ಗವನ್ನು ತುಳಿಯುವುದಿಲ್ಲವೆಂದು ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಉತ್ತರಿಸಿದ್ದಾರೆ. ಚೀನಾದಿಂದ ಕೆಲವು ಪ್ರಚೋದನ್ಮಾತ್ಮಕ ಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ಹೊರಬಿದ್ದಿದೆ.

ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಕಾರಣಗಳು ತಮಗೆ ಪೂರ್ಣ ಅರ್ಥವಾಗಿಲ್ಲ. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಿದೇಶಾಂಗ ವ್ಯವಹಾರಗಳ ಅಮೆರಿಕ ಮಂಡಳಿ ಜತೆ ಸಂವಾದದಲ್ಲಿ ಮಾತನಾಡುತ್ತಾ ಸಿಂಗ್ ಹೇಳಿದ್ದಾರೆ.ಚೀನಾದ ಪ್ರಗತಿ ಸಾಧನೆಯ ಬಗ್ಗೆ ಅವರು ಕಟುವಾದ ಮಾತುಗಲ್ಲಿ ವಾಗ್ದಾಳಿ ಮಾಡಿದರು.

ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳು ಮತ್ತು ಬಹುಜನಾಂಗೀಯ ಹಾಗೂ ಬಹುಸಂಸ್ಕೃತಿ ಹಕ್ಕುಗಳು ಮುಂತಾದ ಮೌಲ್ಯಗಳನ್ನು ಕಡೆಗಣಿಸಿ ಚೀನಾ ಆಡಳಿತಗಾರರು ಪ್ರಗತಿ ಸಾಧಿಸಿದ್ದಾರೆಂದು ಸಿಂಗ್ ಖಾರವಾಗಿ ಹೇಳಿದ್ದಾರೆ. ಭಾರತದ ಸಾಧನೆಗೆ ಹೋಲಿಸಿದರೆ ಚೀನಾದ ಸಾಧನೆ ಮೇಲ್ಮಟ್ಟದಲ್ಲಿದೆಯೆಂದು ಎರಡು ಮಾತಿಲ್ಲ ಎಂದು ಭಾರತದ ಆರ್ಥಿಕ ಸಾಧನೆ ಚೀನಾಗಿಂತ ಹಿಂದುಳಿದ ಬಗ್ಗೆ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ್ದಾರೆ.

ಆದರೆ ದೇಶೀಯ ಉತ್ಪನ್ನ ಬೆಳವಣಿಗೆಗಿಂತ ಮ‌ೂಲಭೂತ ಮಾನವ ಸ್ವಾತಂತ್ರ್ಯ, ಕಾನೂನಿನ ಆಡಳಿತಕ್ಕೆ ಗೌರವ, ಬಹುಧರ್ಮೀಯ,ಬಹುಜನಾಂಗೀಯ ಹಕ್ಕುಗಳಿಗೆ ಗೌರವ ಮುಂತಾದ ಇತರೆ ಮೌಲ್ಯಗಳು ಬಹುಮುಖ್ಯವಾಗಿದೆಯೆಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿ ತಾವು ಚೀನಾದ ಹಾದಿಯನ್ನು ಹಿಡಿದು ಪ್ರಗತಿ ಸಾಧಿಸುವುದಿಲ್ಲ. ಭಾರತ ಹಿಡಿದ ದಾರಿಯಲ್ಲೇ ನಾವು ಸಾಗುತ್ತೇವೆ ಎಂದು ಸಿಂಗ್ ಪ್ರತಿಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ