ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ಗೆ ಮಿಲಿಟರಿ ನೆರವು ದುರ್ಬಳಕೆ: ಪ್ರಧಾನಿ ಕಳವಳ (Singh | Pakistan | India | Military)
Feedback Print Bookmark and Share
 
ಪಾಕಿಸ್ತಾನಕ್ಕೆ ಅಮೆರಿಕ ನೀಡುವ ಮಿಲಿಟರಿ ಮತ್ತಿತರ ನೆರವನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಕಳವಳ ವ್ಯಕ್ತಪಡಿಸಿದರು. ಒಬಾಮಾ ಆಡಳಿತ ಅಧಿಕಾರಿಗಳು ಮತ್ತು ಸದಸ್ಯರ ಜತೆ ಸರಣಿ ಸಭೆಗಳಲ್ಲಿ ವಲಯದ ಪರಿಸ್ಥಿತಿ ವಿಶೇಷವಾಗಿ ಪಾಕಿಸ್ತಾನದ ಮತ್ತು ಆಫ್ಘಾನಿಸ್ತಾನದಿಂದ ಹೊಮ್ಮುವ ಭಯೋತ್ಪಾದನೆ ಮುಖ್ಯವಾಗಿ ಚರ್ಚೆಯಾಯಿತು.

ಸಿಂಗ್ ಅವರು ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪೂರೈಕೆಗಳು ಮತ್ತು ಆರ್ಥಿಕ ನೆರವು ನೀಡುತ್ತಿರುವ ವಿಷಯವನ್ನು ಸಿಂಗ್ ಪ್ರಸ್ತಾಪಿಸಿ, ಮಿಲಿಟರಿ ನೆರವು ಹಾದಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇಂತಹ ಮಿಲಿಟರಿ ಪೂರೈಕೆಯ ಸಾಮಗ್ರಿಗಳನ್ನು ಹಿಂದೆ ನಮ್ಮ ವಿರುದ್ದ ಪ್ರಯೋಗಿಸಲಾಗಿದ್ದು, ಅದರ ಬಗ್ಗೆ ನಮ್ಮ ಕಳವಳ ಇನ್ನೂ ಮುಂದುವರಿದಿದೆ. ಈ ವಿಷಯದ ಬಗ್ಗೆ ಪೂರ್ಣವಾಗಿ ಬಿಂಬಿಸಲು ನಾವು ಅಮೆರಿಕಕ್ಕೆ ಬಿಡುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮ ರಾವ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ