ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅವಧಿ ಮುನ್ನವೇ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ (Sri Lanka | Elections | Civil war | President)
Feedback Print Bookmark and Share
 
ಶ್ರೀಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಷ ಸೋಮವಾರ ಅವಧಿಪೂರ್ವ ಚುನಾವಣೆಗೆ ಕರೆ ನೀಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಸುಮಾರು 25 ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧಕ್ಕೆ ಕೊನೆ ಹಾಡಿದ ಬಳಿಕ ತಮಗಿರುವ ಜನಪ್ರಿಯತೆ ಲಾಭ ಪಡೆದು 6 ವರ್ಷಗಳ ಅವಧಿಯ ಅಧ್ಯಕ್ಷಾವಧಿಯಲ್ಲಿ ವಿಜಯಿಯಾಗಲು ರಾಜಪಕ್ಷ ನಿರ್ಧರಿಸಿದ್ದಾರೆ.

ಆದರೆ ಅಧ್ಯಕ್ಷ ರಾಜಪಕ್ಷ ಅವರು ಸೇನೆಯ ಮಾಜಿ ಮುಖ್ಯಸ್ಥಿ ಜನರಲ್ ಸರತ್ ಫೋನ್‌ಸೆಕಾ ಅವರಿಂದ ತೀವ್ರ ಪೈಪೋಟಿ ಎದುರಿಸುವ ಸಂಭವವಿದೆ. ಸರತ್ ಫೋನ್‌ಸೆಕಾ ಅವರು ಎಲ್‌ಟಿಟಿಇ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಿ ಯುದ್ಧವೀರ ಎನಿಸಿದ್ದರು. ಫೋನ್‌ಸೆಕಾ ಮಿಲಿಟರಿ ಸಾರಥ್ಯ ವಹಿಸಿದ್ದರೂ, ಯುದ್ಧದಲ್ಲಿ ಗೆದ್ದ ಕ್ರೆಡಿಟ್ ರಾಜಪಕ್ಷೆ ಪಾಲಾಗಿತ್ತು.

ಯುದ್ಧದ ಬಳಿಕ ತಮ್ಮನ್ನು ಕಡೆಗಣಿಸಲಾಗಿದೆಯೆಂದು ಆರೋಪಿಸಿರುವ ಫೋನ್‌ಸೆಕಾ, ಚುನಾವಣೆಯಲ್ಲಿ ಪ್ರತಿಪಕ್ಷಗಳ ಸಮ್ಮಿಶ್ರ ಕೂಟಕ್ಕೆ ಸಾರಥ್ಯವಹಿಸುವರೆಂದು ನಿರೀಕ್ಷಿಸಲಾಗಿದೆ. ರಾಜಪಕ್ಷ ಅವರು ಸೋಮವಾರ ಯುಪಿಎಫ್‌ಎ ನಾಯಕರನ್ನು ಭೇಟಿ ಮಾಡಿ ಅವಧಿ ಮುಗಿಯಲು ಎರಡು ವರ್ಷಕ್ಕೆ ಮುನ್ನವೇ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣೆ ಆಯೋಗವು ದಿನಾಂಕಗಳನ್ನು ಪ್ರಕಟಿಸಲಿದೆ. ಜನವರಿ ಮ‌ೂರನೇ ವಾರದಲ್ಲಿ ಚುನಾವಣೆ ನಡೆಯುವುದೆಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ