ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ಇಬ್ಬಗೆಯ ನೀತಿಗೆ ಪ್ರಧಾನಿ ಟೀಕೆ (America | Prime minister | Terrorism | Isi)
Feedback Print Bookmark and Share
 
ದಕ್ಷಿಣ ಏಷ್ಯಾ ಭಾಗದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಅಮೆರಿಕ ಇಬ್ಬಗೆಯ ಧೋರಣೆ ಪ್ರದರ್ಶಿಸುವುದು ಸರಿಯಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಪಾದಿಸಿದ್ದಾರೆ.

ಸಿಂಗ್ ಅವರು ಅಮೆರಿಕ ಸೆನೆಟ್‌ನ ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಆಫ್ಘಾನಿಸ್ತಾನದಲ್ಲಿ ನಡೆಯುವ ಭಯೋತ್ಪಾದನೆ ಕೃತ್ಯದಲ್ಲಿ ಪಾಕಿಸ್ತಾನದ ಐಎಸ್‌ಐ ಕೈವಾಡವಿದ್ದರೆ ಅಮೆರಿಕ ತರಾಟೆಗೆ ತೆಗೆದುಕೊಳ್ಳುತ್ತದೆ.

ಆದರೆ ಭಾರತದಲ್ಲಿ ಭಯೋತ್ಪಾದನೆ ಕೃತ್ಯಗಳಲ್ಲಿ ಪಾಕಿಸ್ತಾನದ ಕೈವಾಡವಿದ್ದರೂ ಆ ಬಗ್ಗೆ ಮೆದುಧೋರಣೆ ತಳೆಯುವ ಮ‌ೂಲಕ ಇಬ್ಬಗೆಯ ಧೋರಣೆ ಪ್ರದರ್ಶಿಸುತ್ತಿದೆಯೆಂದು ಅಮೆರಿಕದ ಇಬ್ಬಗೆಯ ನೀತಿ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಪಾಕಿಸ್ತಾನಕ್ಕೆ ನೀಡಿದ ಮಿಲಿಟರಿ ನೆರವನ್ನು ಪಾಕ್ ಭಾರತದ ಮೇಲೆ ದುರ್ಬಳಕೆಗೆ ಯತ್ನಿಸುತ್ತಿದ್ದರೂ ಅಮೆರಿಕ ಸುಮ್ಮನಿದೆ ಎಂದು ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ