ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಾಲಿನಪುಡಿ ಹಗರಣ: ಚೀನಾದಲ್ಲಿ ಇಬ್ಬರಿಗೆ ಗಲ್ಲು (China | milk powder | Scandal | Tainted)
Bookmark and Share Feedback Print
 
ಮಾಲಿನ್ಯಯುಕ್ತ ಹಾಲಿನ ಪುಡಿಯಿಂದ 6 ಮಕ್ಕಳು ಅಸುನೀಗಿದ ಹಗರಣದಲ್ಲಿ ಭಾಗಿಯಾದ ಇಬ್ಬರನ್ನು ಚೀನಾ ನೇಣುಗಂಬಕ್ಕೆ ಏರಿಸಿದೆ. ಮೆಲಾಮೈನ್ ಕೈಗಾರಿಕೆ ರಾಸಾಯನಿಕದಿಂದ ಮಾಲಿನ್ಯಯುಕ್ತವಾದ ಹಾಲಿನ ಪುಡಿ ಸೇವಿಸಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥತೆಗೀಡಾಗಿದ್ದರು. ಈ ಹಗರಣದಲ್ಲಿ ಭಾಗಿಯಾದ ಇನ್ನೂ 19 ಜನರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಜಾಂಗ್ ಯುಜುನ್ ಮತ್ತು ಗೆಂಗ್ ಜಿನ್‌ಪಿಂಗ್ ಅವರನ್ನು ಗಲ್ಲಿಗೇರಿಸಲಾಯಿತು ಎಂದು ಕೋರ್ಟ್ ಅಧಿಕಾರಿಗಳು ಹೇಳಿದ್ದಾರೆ. ಜಾಂಗ್ ಯಾಜುನ್ ಅವರು ಜು.2007ರಿಂದ ಆ.2008ರವರೆಗೆ 770 ಟನ್ ಕಳಪೆ ಹಾಲಿನ ಪುಡಿ ಮಾರುವ ಮ‌ೂಲಕ ಸಾರ್ವಜನಿಕ ಸುರಕ್ಷತೆಗೆ ಅಪಾಯ ಒಡ್ಡಿದ್ದರೆಂದು ಅಧಿಕೃತ ಸುದ್ದಿಏಜೆನ್ಸಿ ಕ್ಸಿನುವಾ ತಿಳಿಸಿದೆ.

ಈಗ ದಿವಾಳಿಯಾಗಿರುವ ಸಾನ್ಲು ಗ್ರೂಪ್ ಕಂಪೆನಿಗೆ ಹಾಲು ಉತ್ಪಾದನಾ ಕೇಂದ್ರ ನಿರ್ವಹಿಸುತ್ತಿದ್ದ ಜೆಂಗ್ ಜಿನ್‌ಪಿಂಗ್ ಮೆಲಾಮೈನ್‌ಯುಕ್ತ ಹಾಲನ್ನು ಮಾರಿದ ದೋಷಾರೋಪ ಹೊರಿಸಲಾಗಿತ್ತು.ಮೆಲಾಮೈನ್ ಪ್ಲಾಸ್ಟಿಕ್ಸ್ ಮತ್ತು ರಸಗೊಬ್ಬರಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ಆಹಾರೋತ್ಪನ್ನಗಳಿಗೆ ಮೆಲಾಮೈನ್ ಮಿಶ್ರಣ ಮಾಡಿದಾಗ ಪ್ರೋಟೀನ್ ಅಂಶ ಹೆಚ್ಚಿಗಿರುವಂತೆ ಕಂಡುಬಂದರೂ, ಮ‌ೂತ್ರಪಿಂಡ ಮತ್ತು ಕಿಡ್ನಿ ವೈಫ್ಯಲ್ಯವನ್ನು ಉಂಟುಮಾಡುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ