ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುಲಿಗೆ: ಫ್ರಾನ್ಸ್ ಎಲ್ಟಿಟಿಇ ನಾಯಕರು ಜೈಲಿಗೆ (France | Extortion | Jails | Militants)
Bookmark and Share Feedback Print
 
ಫ್ರಾನ್ಸ್‌ನ ತಮಿಳು ಸಮುದಾಯದಿಂದ ಲಕ್ಷಾಂತರ ಡಾಲರ್ ಹಣವನ್ನು ಸುಲಿಗೆ ಮಾಡಿದ ದೋಷಾರೋಪ ಎದುರಿಸುತ್ತಿದ್ದ ತಮಿಳು ವ್ಯಾಘ್ರ ಉಗ್ರಗಾಮಿಗಳನ್ನು ಫ್ರೆಂಚ್ ಕೋರ್ಟ್ ಜೈಲಿಗೆ ಅಟ್ಟಿದೆ. ಫ್ರಾನ್ಸ್‌ನ ತಮಿಳು ವ್ಯಾಘ್ರಗಳ ನಾಯಕ ನಾಡರಾಜಾ ಮತಿಂದಿರನ್ ಸೇರಿದಂತೆ 21 ಜನರು ತಪ್ಪಿತಸ್ಱರೆಂದು ಕೋರ್ಟ್ ನಿರ್ಧರಿಸಿದ್ದು, ಮತಿಂದಿರನ್ ಸುದೀರ್ಘಾವಧಿ 7 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.

ಫ್ರಾನ್ಸ್‌ನ ತಮಿಳು ವಲಸೆಗಾರರಿಗೆ ಕ್ರಾಂತಿಕಾರಿ ತೆರಿಗೆಯನ್ನು ತಮಿಳು ಉಗ್ರಗಾಮಿಗಳು ಹೇರಿದ್ದರೆಂದು ಪ್ರಾಸಿಕ್ಯೂಷನ್ ಆಪಾದಿಸಿದೆ. ಅನೇಕ ಮಂದಿ ವಲಸೆಗಾರರು ರಾಜಕೀಯ ನಿರಾಶ್ರಿತರಾಗಿದ್ದು ಪ್ಯಾರಿಸ್ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಮತೀಂದಿರನ್ ಫ್ರಾನ್ಸ್ ಎಲ್‌ಟಿಟಿಇ ಸಂಘಟನೆಯ ನಾಯಕನೆಂದು ಕೋರ್ಟ್‌ಗೆ ತಿಳಿಸಲಾಗಿತ್ತು.

ಸುಮಾರು 5 ದಶಲಕ್ಷ ಯ‌ೂರೊ ಅಥವಾ 4.5 ದಶಲಕ್ಷ ಪೌಂಡ್ ಹಣವನ್ನು ಫ್ರಾನ್ಸ್‌ನಲ್ಲಿದ್ದ 75,000 ತಮಿಳು ಜನಾಂಗದಿಂದ ಸುಲಿಗೆ ಮಾಡಿದ್ದನೆಂದು ಅವನ ಮೇಲೆ ಆರೋಪಿಸಲಾಗಿತ್ತು.

ಫ್ರಾನ್ಸ್‌ನ ತಮಿಳರ ಸಮನ್ವಯ ಸಮಿತಿಯು ಎಲ್‌ಟಿಟಿಇಯ ಅಂಗವಾದ್ದರಿಂದ ಅದನ್ನು ರದ್ದುಮಾಡಬೇಕೆಂದು ಕೋರ್ಟ್ ಆದೇಶಿಸಿತು ಎಂದು ಎಎಫ್‌ಪಿ ವರದಿಮಾಡಿದೆ. ಕಳೆದ ಏಪ್ರಿಲ್ 2007ರಲ್ಲಿ ಬಹುತೇಕ ಶಂಕಿತರನ್ನು ಬಂಧಿಸಿ, ಭಯೋತ್ಪಾದನೆ ಕೃತ್ಯಕ್ಕೆ ಸಂಚು, ಆರ್ಥಿಕ ನೆರವು ನೀಡಿದ ದೋಷಾರೋಪ ಹೊರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ