ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಲೂಚಿಯಲ್ಲಿ ಭಾರತ ಕೈವಾಡ: ಪಾಕ್ ಸಾಕ್ಷ್ಯ ಸಂಗ್ರಹ (Baluchistan | Pakistan | Khureshi | Pak)
Bookmark and Share Feedback Print
 
ಬಲೂಚಿಸ್ತಾನ ಹಾಗೂ ಆಫ್ಘಾನಿಸ್ತಾನದ ಗಡಿಯಲ್ಲಿ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ಚಟುವಟಿಕೆಗಳಲ್ಲಿ ಭಾರತದ ಪಾತ್ರವಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ‘ಮಹತ್ವದ ಸಾಕ್ಷಾಧಾರ’’ ಸಂಗ್ರಹಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮ‌ೂದ್ ಖುರೇಷಿ ಅವರು ಹೇಳಿದ್ದಾರೆ.

ಸುದ್ದಿಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭಾರತ ಇಂತಹ ವಿಧ್ವಂಸಕಾರಿ ಚಟುವಟಿಕೆಗಳನ್ನು ನಡೆಸಬಾರದೆಂದು ಹಿತವಚನ ಹೇಳಿದ್ದಾರೆ. ಭಾರತದ ವೈರತ್ವ ಮತ್ತು ಪಾಕ್ ವಿರೋಧಿ ಧೋರಣೆ ಬದಲಾಗದಿದ್ದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯು ಕನಸಿನ ಮಾತು ಎಂದು ಅವರು ಅಭಿಪ್ರಾಯಪಟ್ಟರು.

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರೆ ಸಂಘಟನೆಯ 7 ಮಂದಿಯನ್ನು ಪಾಕಿಸ್ತಾನ ಬಂಧಿಸಿದ್ದರೂ, ನಮ್ಮ ಜತೆ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಲು ಭಾರತ ಹಿಂಜರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಂಬೈ ದಾಳಿಯಲ್ಲಿ ಭಾಗಿಯಾದ ಏಳುಮಂದಿ ಲಷ್ಕರ್-ಎ -ತೊಯ್ಬಾ ಉಗ್ರರನ್ನು ಪಾಕಿಸ್ತಾನ ಬಂಧಿಸಿದ್ದರೂ, ಭಾರತ ದ್ವಿಪಕ್ಷೀಯ ಮಾತುಕತೆಗೆ ಹಿಂದೇಟು ಹಾಕುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲವೆಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ