ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್‌1ಎನ್‌1 ಭಯ: ಕೆನ್ನೆಗೆ ಕ್ರಿಸ್‌ಮಸ್ ಚುಂಬನಕ್ಕೆ ಸಲಹೆ (Christmas | Swine flu | Britain | Jo Bryant)
Bookmark and Share Feedback Print
 
ಕ್ರಿಸ್‌ಮಸ್ ರಜಾದಿನಗಳಲ್ಲಿ ಎಚ್‌1ಎನ್‌1 ಸೋಂಕು ಹರಡದಂತೆ ತಡೆಯಲು ಕೈಕುಲುಕುವ ಬದಲಿಗೆ ಕೆನ್ನೆಗೆ ಚುಂಬನ ವಿನಿಮಯ ಮಾಡಿಕೊಳ್ಳುವುದು ಹೆಚ್ಚು ನೈರ್ಮಲ್ಯಯುತ ಎಂದು ಶಿಷ್ಟಾಚಾರ ಕುರಿತ ಬ್ರಿಟನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ತುಟಿಗಳಿಗೆ ಚುಂಬಿಸುವ ಬದಲಿಗೆ ಕ್ರಿಸ್‌ಮಸ್ ಚುಂಬನವನ್ನು ಕೆನ್ನೆಗಳಿಗೆ ನೀಡುವ ಶಿಷ್ಟಾಚಾರ ಪಾಲಿಸಬೇಕೆಂದು ಅದು ಎಚ್ಚರಿಸಿದೆ.

ಇದರಿಂದಾಗಿ ಹಂದಿ ಜ್ವರದ ಆತಂಕದ ನಡುವೆಯ‌ೂ ಮಿಸ್ಟಲ್‌ಟೋಯಿ ವೃಕ್ಷದ ಕೆಳಗೆ ಚುಂಬನ ನೀಡುವುದಕ್ಕೆ ಜನರಿಗೆ ಹೆದರಿಕೆ ಬರುವುದಿಲ್ಲವೆಂದು ತಿಳಿಸಿದೆ. ಜನರು ಚುಂಬನ ನೀಡುವ ವ್ಯಕ್ತಿಯನ್ನು ಭುಜ ಮತ್ತು ಮೇಲು ತೋಳುಗಳಲ್ಲಿ ಮಾತ್ರ ಮುಟ್ಟಬೇಕೆಂದೂ ಅದು ಸಲಹೆ ಮಾಡಿದೆ.

ಡೆಬ್ರೆಟ್ ಶಿಷ್ಟಾಚಾರದ ಸಲಹೆಗಾರ ಜೊ ಬ್ರಯಾಂಟ್, ಕಾಯಿಲೆಗೆ ಒಳಗಾದ ಅಸ್ವಸ್ಥರು ಸಂತೋಷಕೂಟಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸಿದ್ದಾರೆ. ಅತಿಯಾದ ಮದ್ಯಪಾನಿಗಳು ಮಿಸ್ಟಲ್‌ಟೋಯಿ ವೃಕ್ಷದಿಂದ ದೂರವುಳಿಯುವಂತೆ ಅವರು ಸಲಹೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ