ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪರಮಾಣು ಒಪ್ಪಂದ ಪೂರ್ಣ ಜಾರಿಗೆ ಬದ್ಧ: ಒಬಾಮಾ (Obama | India | Washington | Vibrant)
Bookmark and Share Feedback Print
 
ಭಾರತ ಚಲನಶೀಲ ಮತ್ತು ಜವಾಬ್ದಾರಿಯುತ ಜಾಗತಿಕ ಶಕ್ತಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬಣ್ಣಿಸಿದ್ದು, ಜಾಗತಿಕ ಸವಾಲುಗಳನ್ನು ನಿಭಾಯಿಸಲು ದಕ್ಷಿಣ ಏಷ್ಯಾ ರಾಷ್ಟ್ರ ಮುಖ್ಯ ಪಾತ್ರವಹಿಸುವುದೆಂದು ಆಶಿಸಿದ್ದಾರೆ. ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಒಬಾಮಾ, ಒಪ್ಪಂದದ ಪೂರ್ಣ ಜಾರಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಶ್ವೇತಭವನದಲ್ಲಿ ಮಾತುಕತೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಜಂಟಿ ಹೇಳಿಕೆ ನೀಡಿದ ಒಬಾಮಾ, ಭಾರತ ಏಷ್ಯಾದಲ್ಲಿ ಉದಯಿಸುತ್ತಿರುವ ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿದ್ದು, ಭಾರತದ ನಾಯಕತ್ವ ಆ ಪ್ರದೇಶದಾದ್ಯಂತ ಭದ್ರತೆಯನ್ನು ವಿಸ್ತರಿಸುತ್ತಿದೆಯೆಂದು ನುಡಿದರು.

ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯವು 21ನೇ ಶತಮಾನದ ನಿರ್ಣಾಯಕ ಸಂಬಂಧಗಳಲ್ಲಿ ಒಂದಾಗಿದೆಯೆಂದು ಹೇಳಿದರು. ಭಾರತ-ಪಾಕ್ ಪರಮಾಣು ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಪ್ಪಂದವನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.ಪರಮಾಣು ಒಪ್ಪಂದದ ಪೂರ್ಣ ಜಾರಿಗೆ ಪರಸ್ಪರ ಸಮ್ಮತಿಸಿರುವುದಾಗಿ ಸಿಂಗ್ ಕೂಡ ಹೇಳಿದರು.

ಪರಮಾಣು ಒಪ್ಪಂದವನ್ನು ಆದಷ್ಟು ಬೇಗ ಕಾರ್ಯಾಚರಣೆಗೆ ತರುವುದು ಉಭಯ ರಾಷ್ಟ್ರಗಳ ಸಮಾನ ಸಂಕಲ್ಪ ಎಂದು ಅಧ್ಯಕ್ಷ ಒಬಾಮಾ ಪುನರ್‌ದೃಢೀಕರಿಸಿದ್ದಾರೆಂದು ಅವರು ಹೇಳಿದರು. ಅಣ್ವಸ್ತ್ರ ತಂತ್ರಜ್ಞಾನ ಹಸ್ತಾಂತರ ಮತ್ತು ದ್ವಿಬಳಕೆ ತಂತ್ರಜ್ಞಾನದ ರಫ್ತಿನ ಮೇಲೆ ನಿರ್ಬಂಧ ತೆಗೆಯುವುದು ಉಭಯ ರಾಷ್ಟ್ರಗಳ ಕೈಗಾರಿಕೆ ಸಂಶೋಧನೆಗೆ ವಿಸ್ತಾರ ಕ್ಷೇತ್ರಗಳನ್ನು ತೆರೆದಿಡುತ್ತದೆ ಎಂದು ಪ್ರಧಾನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಯೋತ್ಪಾದನೆ ನಿಗ್ರಹ ವಲಯದಲ್ಲಿ ಕೂಡ ಸಹಕಾರ ಹೆಚ್ಚಳಕ್ಕೆ ಸಿಂಗ್ ಮತ್ತು ಒಬಾಮಾ ಸಮ್ಮತಿಸಿದರು.ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಧ್ಯಸ್ಥಿಕೆ ವಹಿಸುವ ವಿಚಾರವನ್ನು ಒಬಾಮಾ ತಳ್ಳಿಹಾಕಿದರು. ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ