ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ವಿರುದ್ಧ ಕ್ರಮ: ಪಾಕ್‌ಗೆ ಸ್ಪಷ್ಟ ಸಂದೇಶ (Obama | Mumbai | Singh | Pakistan)
Bookmark and Share Feedback Print
 
ಮುಂಬೈ ಭಯೋತ್ಪಾದನೆ ದಾಳಿ ನಡೆದು ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದಾಳಿಯ ಕಾರಣಕರ್ತರಿಗೆ ಶಿಕ್ಷೆ ವಿಧಿಸಲೇಬೇಕಾದ ಅಗತ್ಯವನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಸೂಚಿಸಿರುವ ಸಂದೇಶದಲ್ಲಿ ಹೇಳಿದ್ದಾರೆ. ಮುಂಬೈ ದಾಳಿಯ ಪ್ರಥಮ ವಾರ್ಷಿಕದ ಸಂದರ್ಭದಲ್ಲಿ ಆ ದಾಳಿಯನ್ನು ಅಮೆರಿಕ ಖಂಡಿಸುತ್ತದೆಂದು ಒಬಾಮಾ ಪುನರುಚ್ಚರಿಸಿದ್ದಾಗಿ ಮಂಗಳವಾರ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಧಾನಮಂತ್ರಿ ಸಿಂಗ್ ಭೇಟಿ ಸಂದರ್ಭದಲ್ಲಿ ಓವಲ್ ಕಚೇರಿಯಲ್ಲಿ ನಡೆದ ಭೇಟಿ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.ಉಗ್ರಗಾಮಿಗಳಿಗೆ ಮತ್ತು ಅವರ ಚಟುವಟಿಕೆಗಳಿಗೆ ಆಶ್ರಯ ನೀಡುವ ಸುರಕ್ಷಿತ ತಾಣಗಳನ್ನು ನಾಶಮಾಡಲು ವಿಶ್ವಾಸಾರ್ಹ ಮತ್ತು ದೃಢ ಕ್ರಮಗಳನ್ನು ಕೈಗೊಳ್ಳಲು ಉಭಯ ನಾಯಕರು ಸಮ್ಮತಿಸಿದರು. ಇದು ಈ ವಲಯದ ಮತ್ತು ವಿಶ್ವದ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸುತ್ತದೆಂದು ಹೇಳಿಕೆ ತಿಳಿಸಿದೆ.

ಸಿಂಗ್ ಮತ್ತು ಒಬಾಮಾ ಅವರು ಭಯೋತ್ಪಾದನೆ ನಿಗ್ರಹ, ಮಾಹಿತಿ ಹಂಚಿಕೆ ಮತ್ತು ಸಾಮರ್ಥ್ಯ ನಿರ್ಮಾಣದಲ್ಲಿ ಸಹಯೋಗ ವಿಸ್ತರಣೆಯಲ್ಲಿ ಸಹಕಾರ ಕ್ರಮಗಳಿಗೆ ನಿರ್ಧರಿಸಿದರು. ಭಯೋತ್ಪಾದನೆ ಮತ್ತು ಭಾರತದ ನೆರೆಯಿಂದ ಹೊಮ್ಮಿದ ಹಿಂಸಾತ್ಮಕ ಉಗ್ರಗಾಮಿಗಳ ಬೆದರಿಕೆ ಕುರಿತು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ