ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ವೇತಭವನದ ಹುಲ್ಲುಹಾಸಿನಲ್ಲಿ ರಸರಾತ್ರಿಯ ಡಿನ್ನರ್ (Obama | Singh | Dinner | White House)
Bookmark and Share Feedback Print
 
PTI
PTI
ಔಪಚಾರಿಕ ಚರ್ಚೆಗಳಿಂದ ಕೂಡಿದ ಬಿಡುವಿಲ್ಲದ ದಿನದ ಬಳಿಕ ಅಮೆರಿಕ ಅಧ್ಯಕ್ಷ ಒಬಾಮಾ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬ್ಲಾಕ್ ಟೈ ಭೋಜನಕೂಟದ ರಾಯಭಾರ. ಮಂಗಳವಾರ ರಾತ್ರಿ ಶ್ವೇತಭವನದ ಹುಲ್ಲುಹಾಸಿನಲ್ಲಿ, ಮಿನುಗುವ ನಕ್ಷತ್ರಗಳ ಅಡಿಯಲ್ಲಿ ತಾತ್ಕಾಲಿಕ ಡೇರೆಯಲ್ಲಿ ಒಬಾಮಾ ಆಡಳಿತ ಆತಿಥ್ಯವಹಿಸಿದ ಪ್ರಥಮ ಭೋಜನಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ಒಬಾಮಾ ಮತ್ತು ಮಿಶೆಲೆ ಒಬಾಮಾ ಹಾರ್ದಿಕ ಸ್ವಾಗತ ನೀಡಿದರು.

ಮೊದಲಿಗೆ 140 ಜನರಿದ್ದ ಅತಿಥಿಗಳ ಪಟ್ಟಿ ಬಳಿಕ 400ರವರೆಗೆ ಬೆಳೆದು ಕೊನೆಗೆ ಭೋಜನಕೂಟದ ಸಭೆಯನ್ನು ಹೊರಾಂಗಣದ ಹುಲ್ಲುಹಾಸಿನಲ್ಲಿ ಆಯೋಜಿಸಲಾಯಿತು. ಮೊಂಬತ್ತಿ ಬೆಳಕಿನ ಭೋಜನಕೂಟಕ್ಕೆ ಅಮೆರಿಕ, ಭಾರತದ ಗಣ್ಯಾತಿಗಣ್ಯರು ಸೇರಿದ್ದರು. 'ಆಪ್ ಕಾ ಸ್ವಾಗತ್ ಹೈ' ಎಂದು ಒಬಾಮಾ ಮನಮೋಹನ್ ಸಿಂಗ್ ಅವರಿಗೆ ಹಿಂದಿಯಲ್ಲೇ ಸ್ವಾಗತ ಕೋರಿದರು.

ಭೋಜನಕೂಟದ ತಿನಿಸಿನ ಪಟ್ಟಿಯು ಸಸ್ಯಾಹಾರ ಮತ್ತು ಮಾಂಸಾಹಾರದ ಸಮ್ಮಿಳಿತವಾಗಿತ್ತು. ಬಟಾಟೆ ಮತ್ತು ಎಗ್ ಪ್ಲಾಂಟ್ ಸಲಾಡ್, ಈರುಳ್ಳಿ ಬೀಜದ ವಿನಯ್‌ಗ್ರೆಟ್ಟೆ, ಕೆಂಪು ಲೆಂಟಿಲ್ ಸೂಪ್ ಜತೆಗೆ ಚೀಸ್. ಮುಖ್ಯ ಮೆನುನಲ್ಲಿ ಹುರಿದ ಬಟಾಟೆ ಡಂಪ್ಲಿಂಗ್ಸ್, ಗ್ರೀನ್ ಕರಿ ಸೀಗಡಿ ಮತ್ತು ಬಾಸ್ಮತಿ ಅನ್ನ.

ಅದರ ಹಿಂದೆ ಕುಂಬಳಕಾಯಿ ಪೈ ಟಾರ್ಟ್, ಪಿಯರ್ ಟಾಟಿನ್, ಕ್ಯಾರಮೆಲ್ ಸಾಸ್.ಕೊನೆಯಲ್ಲಿ ಪೆಟಿಟ್ಸ್ ಫೋರ್ಸ್, ಕಾಫೀ ಗೇರುಬೀಜದ ಬ್ರಿಟಲ್ ಮತ್ತು ವೆನಿಲ್ಲಾ ಭೋಜನಕೂಟಕ್ಕೆ ಮೆರುಗು ನೀಡಿತು.ಭೋಜನಕೂಟದ ಬಳಿಕ, ಆಸ್ಕರ್ ವಿಜೇತರಾದ ಎ.ಆರ್. ರೆಹ್ಮಾನ್ ಮತ್ತು ಜೆನ್ನಿಫರ್ ಹಡ್ಸನ್ ಸಂಗೀತದ ಮೋಡಿಗೆ ಅತಿಥಿಗಳು ಪುಳಕಿತರಾದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಬಾಮಾ, ಸಿಂಗ್, ಮಿಶೆಲೆ, ಭೋಜನಕೂಟ