ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಢಿಮಾಯಿ ಜಾತ್ರೆಯಲ್ಲಿ ಕೋಣಗಳ ಮಾರಣಹೋಮ (Katmandu | Bairapur | Gadimai)
Bookmark and Share Feedback Print
 
ನೇಪಾಳದ ಬಾರಾ ಜಿಲ್ಲೆಯ ಬೈರಾ‌ಪುರ್‌ನಲ್ಲಿ ನಡೆದ ಗಢಿಮಾಯಿ ಜಾತ್ರೆಯಲ್ಲಿ 105 ಕೋಣಗಳು ಕಟುಕರ ಕತ್ತಿಗೆ ನೆತ್ತಿಯೊಡ್ಡಿದವು. ಈ ಜಾತ್ರೆಗೆ ಬಲಿಗಾಗಿ ಸರಬರಾಜು ಮಾಡಿದ ಕೋಣಗಳು ಬಿಹಾರ ರಾಜ್ಯಕ್ಕೆ ಸೇರಿದ್ದು, ಇನ್ನೂ ಕೆಲವನ್ನು ಉತ್ತರಪ್ರದೇಶ,ಪಶ್ಚಿಮ ಬಂಗಾಳದಿಂದ ತರಿಸಲಾಗಿದೆ. ಆರು ಟ್ರಕ್‌ಗಳಲ್ಲಿ ಸಾವಿರಾರು ಪಾರಿವಾಳಗಳನ್ನು ಹೇರಿಕೊಂಡು ಬೈರಾಪುರಕ್ಕೆ ತರಲಾಯಿತು.

ಜಾತ್ರೆಯ ಸಂಪ್ರದಾಯವೆಂದರೆ ಸಾವಿರಾರು, ಪ್ರಾಣಿಪಕ್ಷಗಳನ್ನು ಬಲಿಕೊಟ್ಟರೆ ಸುಖ, ಸಮೃದ್ಧಿ ನೆಲೆಸುತ್ತದೆಂಬ ಕುರುಡು ನಂಬಿಕೆ. ಜಾತ್ರೆಯಲ್ಲಿ ಪ್ರಾಣಿಗಳ ಬಲಿಯೇ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಸಾವಿರಾರು ಜನರು ಬಲಿ ವೀಕ್ಷಣೆಗೆ ಬರುತ್ತಾರೆ.ಜಾತ್ರೆಗೆ ಮುನ್ನ ಪ್ರಾಣಿ ದಯಾ ಸಂಘಟನೆಗಳು ಪ್ರಾಣಿ ಬಲಿ ತಡೆಗಟ್ಟುವ ಸಲುವಾಗಿ ಆಂದೋಲನ ನಡೆಸುವುದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಕಳೆದ ವರ್ಷ ಬಲಿಯಾದ ಪ್ರಾಣಿಗಳ ಸಂಖ್ಯೆ 13,000. ಈ ವರ್ಷ 15,000 ಪ್ರಾಣಿಗಳು ಕಟುಕರ ಕತ್ತಿಗೆ ತಲೆಯೊಡ್ಡಿವೆ. ಇನ್ನು ಕುರಿ, ಪಾರಿವಾಳಗಳು ಬಲಿಯಾಗುವ ಸಂಖ್ಯೆ ಲೆಕ್ಕಕ್ಕೇ ಸಿಗುವುದಿಲ್ಲವೆಂದು ತಿಳಿದುಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ