ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ ಜತೆ ನಂಟು : ಪಾಕ್ ನಿವೃತ್ತ ಮೇಜರ್ ಬಂಧನ (Headly | Pak | Major | Mumbai)
Bookmark and Share Feedback Print
 
ಭಾರತ ಮತ್ತು ಡೆನ್ಮಾರ್ಕ್ ದಾಳಿಗೆ ಸಂಚು ಮತ್ತು ಮುಂಬೈ ದಾಳಿಯಲ್ಲಿ ಭಾಗಿಯಾದ ಆರೋಪ ಮೇಲೆ ಎಫ್‌ಬಿಐ ಬಂಧಿಸಿದ ಕೋಲ್ಮನ್ ಹೆಡ್ಲಿ ಮತ್ತು ತಹಾವುರ್ ಹುಸೇನ್ ರಾಣಾ ಜತೆ ನಂಟು ಹೊಂದಿದ್ದ ನಿವೃತ್ತ ಮೇಜರ್ ಒಬ್ಬರನ್ನು ಪಾಕಿಸ್ತಾನ ಮಿಲಿಟರಿ ಬಂಧಿಸಿದೆ. ಬಂಧಿತ ಮೇಜರ್ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದು, ಹೆಡ್ಲಿ ಮತ್ತಾ ರಾಣಾ ಜತೆ ನಿಕಟ ಸಂಪರ್ಕ ಹೊಂದಿದ್ದನೆಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಮೇಜರ್ ಅವರನ್ನು ಗುಪ್ತಚರ ಏಜನ್ಸಿಗಳು ವಿಚಾರಣೆ ನಡೆಸುತ್ತಿವೆಯೆಂದು ಸೇನೆಯ ವಕ್ತಾರ ತಿಳಿಸಿದ್ದಾರೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಕರ್ನಲ್‌ಗಳು ಸೇರಿದಂತೆ ಪ್ರಸಕ್ತ ಸೇವೆಯಲ್ಲಿರುವ ಐವರು ಸೇನಾಧಿಕಾರಗಳ ಬಂಧಿಸಿರುವುದು ಬರೀ ವದಂತಿ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯ ಕಚೇರಿ ಇರುವ ರಾವಲ್ಪಿಂಡಿಯಲ್ಲಿ ಈ ನಿವೃತ್ತ ಮೇಜರ್‌ನನ್ನು ಬಂಧಿಸಲಾಗಿದೆ. ಎಫ್ ಬಿಐ ಮಾಹಿತಿ ಆಧಾರದ ಮೇಲೆ ಈತ ಹೆಡ್ಲಿ ಮತ್ತು ರಾಣಾ ಜೊತೆಗೆ ದೂರವಾಣಿ ಮತ್ತು ಇ-ಮೇಲ್ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಮುಂಬೈ, ಪಾಕಿಸ್ತಾನ, ಕರ್ನಲ್