ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಂದುವಾಗಿ ಗುರುತಿಸಲು ಮುಸ್ಲಿಂ ಮಹಿಳೆ ಹೋರಾಟ (Malaysia | Islam | Hindu | Banggarma)
Bookmark and Share Feedback Print
 
ಮಗುವಾಗಿದ್ದಾಗಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಮಲೇಶಿಯದ ಮಹಿಳೆಯೊಬ್ಬರು ತಮ್ಮನ್ನು ಹಿಂದುವಾಗಿ ಗುರುತಿಸಲು ಹೋರಾಟ ನಡೆಸಿದ್ದಾರೆ. ಅವರು ಕೇವಲ ಒಂದು ವರ್ಷದ ಮಗುವಾಗಿದ್ದಾಗ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆಂಬ ಸರ್ಕಾರದ ವಾದವನ್ನು ಅವರು ಅಲ್ಲಗಳೆದಿದ್ದಾರೆ. ಸಿತಿ ಹಸ್ನಾ ವಂಗಾರಾಂ ಅಬ್ದುಲ್ಲಾ ಅವರು ತಮ್ಮನ್ನು ಎಸ್. ಬಾಂಗರ್ಮ ಎಂದು ಕರೆದುಕೊಳ್ಳಲು ಬಯಸಿದ್ದಾರೆ.

ತಾನು ಮಗುವಾಗಿದ್ದಾಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡೆನೆಂಬ ಸರ್ಕಾರದ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ. ಆ ಸಂದರ್ಭದಲ್ಲಿ ತಮಗಿಂತ ಐದು ವರ್ಷ ಕಿರಿಯ ವಯಸ್ಸಿನ ಸೋದರಿ ಜನಿಸಿಯೇ ಇರಲಿಲ್ಲವೆಂದು ಹೇಳಿದ್ದಾರೆ.ಮ‌ೂವರು ಒಡಹುಟ್ಟಿದವರನ್ನು ತಮ್ಮ ಜತೆ ಕ್ಪೇಮಾಭ್ಯುದಯ ಗೃಹದಲ್ಲಿ ಇರಿಸಲಾಗಿದ್ದು, ನಮ್ಮ ಬಳಿ 1989ರ ಡಿ.28ರ ಮತಾಂತರ ಪ್ರಮಾಣಪತ್ರಗಳಿವೆ.

ನಮ್ಮ ಸೋದರಿ ಹುಟ್ಟದಿರುವಾಗಲೇ 1983ರಲ್ಲಿ ನಮ್ಮ ತಂದೆ ಮತಾಂತರ ಮಾಡುವುದು ಹೇಗೆಂದು ಬಂಗಾರ್ಮ ಪ್ರಶ್ನಿಸಿದ್ದಾರೆ. ಬಾಂಗರ್ಮ ಅವರನ್ನು 1983ರಲ್ಲಿ ಮತಾಂತರಗೊಳಿಸಲಾಯಿತೆಂಬ ಸಮಾಜಕಲ್ಯಾಣ ಇಲಾಖೆಯ ವಾದ ವ್ಯತಿರಿಕ್ತವಾಗಿದೆ.1989ರಲ್ಲಿ 7 ವರ್ಷ ವಯಸ್ಸಿನವಳಾಗಿದ್ದಾಗ ಆಕೆಗೆ ಮತಾಂತರ ಪ್ರಮಾಣಪತ್ರ ನೀಡಲಾಗಿತ್ತು ಎಂದು ಅವರ ವಕೀಲರು ವಾದಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ