ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ವೇತಭವನದ ಔತಣಕೂಟದಲ್ಲಿ ಆಹ್ವಾನವಿಲ್ಲದ ದಂಪತಿ (White House | Security Breach | Washington | Obama)
Bookmark and Share Feedback Print
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಶ್ವೇತಭವನದ ಔತಣಕೂಟಕ್ಕೆ ಆಹ್ವಾನ ನೀಡಿರದ ದಂಪತಿ ಭದ್ರತೆಯನ್ನು ಭೇದಿಸಿ ಹೇಗೆ ಒಳಕ್ಕೆ ನುಗ್ಗಿದರೆಂಬ ಬಗ್ಗೆ ಗುಪ್ತಚರ ಸೇವೆ ತನಿಖೆ ನಡೆಸುತ್ತಿರುವುದಾಗಿ ವಕ್ತಾರ ಬುಧವಾರ ತಿಳಿಸಿದ್ದಾರೆ.

ಅಧ್ಯಕ್ಷರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ರಕ್ಷಣೆಗೆ ಹೊಣೆ ಹೊತ್ತಿರುವ ಏಜೆನ್ಸಿಯು ಭದ್ರತಾ ಲೋಪ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತಿದೆಯೆಂದು ಅಮೆರಿಕ ಗುಪ್ತಚರ ಸೇವೆಯ ವಕ್ತಾರ ಎಡ್ವಿನ್ ಡೊನೊವಾನ್ ತಿಳಿಸಿದರು.

ಅಧಿಕೃತ ಅತಿಥಿ ಅಭ್ಯಾಗತರ ಪಟ್ಟಿಯಲ್ಲಿ ಹೆಸರಿಲ್ಲದ ಉತ್ತರ ವಿರ್ಜಿನಿಯದ ದಂಪತಿ ತಾರೆಖ್ ಮತ್ತು ಮಿಶೆಲೆ ಸಲಾಹಿ ಶ್ವೇತಭವನದ ಔತಣಕೂಟಕ್ಕೆ ಆಗಮಿಸಿದ್ದು, ಸೌತ್ ಲಾನ್ ಟೆಂಟ್‌ನ ಮೇಜಿನಲ್ಲಿ ಕುಳಿತಿರಲಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಸುವಂತೆ ಶ್ವೇತಭವನವು ಗುಪ್ತಚರ ಸೇವೆಗೆ ಕೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಷಿಂಗ್ಟನ್ ಪೋಸ್ಟ್‌ನಲ್ಲಿ ವರದಿಯಲ್ಲಿ ಹೆಸರಿಸಲಾಗಿರುವ ಇಬ್ಬರು ವ್ಯಕ್ತಿಗಳ ಹೆಸರು ಆಹ್ವಾನಿತರ ಅತಿಥಿಗಳ ಪಟ್ಟಿಯಲ್ಲಿತ್ತೇ ಎಂದು ಖಾತರಿಗೆ ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿರದ ಒಂದು ಚೆಕ್‌ಪಾಯಿಂಟ್ ಗುರುತಿಸಿರುವುದು ಆರಂಭದ ತನಿಖೆಯಲ್ಲಿ ಗೊತ್ತಾಗಿದೆ ಎಂದು ಡೊನೊವಾನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಬಾಮಾ, ಶ್ವೇತಭವನ, ಅಮೆರಿಕ, ದಂಪತಿ