ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರ್ಜೈ ಜತೆ ಮಾತುಕತೆಗೆ ತಾಲಿಬಾನ್ ನಿರಾಕರಣೆ (Taliban | Afghan | Karzai | Omar)
Bookmark and Share Feedback Print
 
ತಾಲಿಬಾನ್ ಕಟ್ಟಾ ಉಗ್ರವಾದಿ ನಾಯಕ ಮುಲ್ಲಾ ಒಮರ್ ಅಧ್ಯಕ್ಷ ಹಮೀದ್ ಕರ್ಜೈ ಜತೆ ಮಾತುಕತೆ ನಡೆಸಲು ನಿರಾಕರಿಸುವ ಮ‌ೂಲಕ ಮತ್ತೆ ಹಿಂಸಾಚಾರದ ಕಹಳೆ ಊದಿದ್ದು, ಕೈಗೊಂಬೆ ಆಡಳಿತದ ಜತೆ ಸಂಪರ್ಕ ಕಳೆದುಕೊಳ್ಳುವಂತೆ ಆಫ್ಘನ್ನರಿಗೆ ಕರೆ ನೀಡಿದ್ದಾನೆ. ಆಫ್ಘಾನಿಸ್ತಾನದಲ್ಲಿ ವಿದೇಶಿ ಪಡೆಗಳು ಯುದ್ಧದಲ್ಲಿ ಸೋಲನುಭವಿಸುತ್ತಿದೆಯೆಂದು ಮುಲ್ಲಾ ಓಮರ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಕರ್ಜೈ ತಮ್ಮ ಉದ್ಘಾಟನೆ ಭಾಷಣದಲ್ಲಿ ತಾಲಿಬಾನ್ ಜತೆ ಸಂಧಾನದ ಪ್ರಸ್ತಾಪ ಮಾಡಿದ ಒಂದು ವಾರದ ಬಳಿಕ ಮುಸ್ಲಿಂ ಈದ್ ರಜಾದಿನಕ್ಕೆ ಮುಂಚಿತವಾಗಿ ಮುಲ್ಲಾ ಓಮರ್ ಸಂದೇಶ ಹೊರಬಿದ್ದಿದೆ. ಭಯೋತ್ಪಾದನೆಯನ್ನು ತ್ಯಜಿಸುವ ಮಾಜಿ ತಾಲಿಬಾನಿಗಳನ್ನು ಸರ್ಕಾರದಲ್ಲಿ ಸೇರ್ಪಡೆ ಮಾಡುವ ಅಗತ್ಯದ ಬಗ್ಗೆ ಕರ್ಜೈ ಸುಳಿವು ನೀಡಿ, ತಾಲಿಬಾನ್ ಜತೆ ಸಂಧಾನಕ್ಕೆ ಮುಂದಾಗಿದ್ದರು.

ಗೊಂಬೆ ಆಡಳಿತವೆಂದು ಪರಿಗಣಿಸಿರುವ ಕರ್ಜೈ ಸರ್ಕಾರದ ಜತೆ ಮಾತುಕತೆ ನಡೆಸುವುದು ಅಥವಾ ಸರ್ಕಾರಕ್ಕೆ ಸೇರುವುದಕ್ಕೆ ಕಟ್ಟಾ ಉಗ್ರವಾದಿ ಸಂಘಟನೆ ಹಿಂದೆಯೇ ನಿರಾಕರಿಸಿದೆ. ನಮ್ಮ ಮೇಲಿನ ದಾಳಿಕೋರರು ತಪ್ಪಿಸಿಕೊಳ್ಳುತ್ತಿದ್ದಾರೆನ್ನುವುದು ನಮ್ಮ ರಾಷ್ಟ್ರದಲ್ಲಿ ವಾಸ್ತವತೆಗಳು ಸೂಚಿಸುತ್ತಿವೆ ಎಂದು ಓಮರ್ ತಾಲಿಬಾನಿಗಳು ಬಳಸುವ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ