ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಉಗ್ರರ ಗುಂಪು ನಾಶಕ್ಕೆ ಖಾತರಿ: ಅಮೆರಿಕ (Pak | Mumbai | Lashkar | Pakistan)
Bookmark and Share Feedback Print
 
ಪಾಕಿಸ್ತಾನವು ಲಷ್ಕರೆ ತೊಯ್ಬಾ ರೀತಿಯ ಭಯೋತ್ಪಾದಕ ಗುಂಪುಗಳನ್ನು ಪುಡಿ ಮಾಡಿ ಅವರಿಗೆ ಸುರಕ್ಷಿತ ಸ್ವರ್ಗ ನಿರಾಕರಿಸುವುದನ್ನು ಖಾತರಿ ಮಾಡಲು ಅಮೆರಿಕ ಎಲ್ಲ ಕೆಲಸವನ್ನು ಮಾಡುತ್ತಿದೆಯೆಂದು ಅಮೆರಿಕ ಗುರುವಾರ ತಿಳಿಸಿದೆ. ನಿಖರವಾಗಿ ಒಂದು ವರ್ಷದ ಕೆಳಗೆ ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ಗುಂಡುಗಳಿಗೆ ಬಲಿಯಾದ 166 ಜನರನ್ನು ದೇಶ ಸ್ಮರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕ ಮೇಲಿನ ವಿಷಯವನ್ನು ತಿಳಿಸಿದೆ.

ಎಲ್ಲ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡುವುದು ಪಾಕಿಸ್ತಾನದ ಸ್ವಯಂ ಹಿತಾಸಕ್ತಿಗೆ ಸಂಬಂಧಿಸಿದ್ದು, ಹಾಗೆ ಮಾಡಿದರೆ, ಅದು ಅಂತಾರಾಷ್ಟ್ರೀಯ ಬೆಂಬಲ ಮತ್ತು ಇನ್ನಷ್ಟು ಆರ್ಥಿಕ ನೆರವು ಗಳಿಸುತ್ತದೆಂದು ಹೇಳಿದ್ದಾರೆ.

ನಾವು ನಮ್ಮ ನಿಲುವನ್ನು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದ್ದೇವೆಂದು ಭರವಸೆ ನೀಡುತ್ತೇವೆ. ನಾವು ದಿನನಿತ್ಯವೂ ಪಾಕ್ ಜತೆ ಸಂವಾದ ನಡೆಸುವುದನ್ನು ಮುಂದುವರಿಸಿದ್ದು, ಭಯೋತ್ಪಾದಕರನ್ನು ಸಂಪೂರ್ಣ ನಿಶ್ಶಸ್ತ್ರೀಕರಣಗೊಳಿಸುವಂತೆ ಅವರಿಗೆ ಪ್ರೋತ್ಸಾಹಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ. ಏಕೆಂದರೆ ಅದು ಅವರ ಸ್ವಂತ ಹಿತಾಸಕ್ತಿಯಿಂದ ಕೂಡಿದೆಯೆಂದು ಜೋನ್ಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ