ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರೆಕ್ಕೆ ಕಟ್ಟಿಕೊಂಡು ಹಾರಿದ ಸಾಹಸಿ ಸಮುದ್ರಕ್ಕೆ ಬಿದ್ದ (Swiss | Spain | Morocco | Atlantic)
Bookmark and Share Feedback Print
 
ಮೊರಕ್ಕೊದಿಂದ ಸ್ಪೇನ್‌ವರೆಗೆ ಜೆಟ್-ಶಕ್ತಿಯ ರೆಕ್ಕೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಹಾರಾಟ ಮಾಡಲು ಯತ್ನಿಸಿದ ಸ್ವಿಸ್ ಸಾಹಸಿಯೊಬ್ಬ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ ಪ್ರಸಂಗ ವರದಿಯಾಗಿದೆ. ರಕ್ಷಣಾ ಹೆಲಿಕಾಪ್ಟರ್ ತಕ್ಷಣವೇ ಕಾರ್ಯಾಚರಣೆ ಕೈಗೊಂಡು ನೀರಿನಿಂದ ಹೊರಕ್ಕೆ ಅವನನ್ನು ಎಳೆದಿದ್ದರಿಂದ ಅವನು ಯಾವುದೇ ಗಾಯಗಳಾಗಿರದೇ ಅಪಾಯದಿಂದ ಪಾರಾಗಿದ್ದಾನೆ.

ಟ್ಯಾಂಜಿಯರ್ಸ್‌ನಿಂದ ಹಾರಿದ ಯೆವೆಸ್ ರೋಸಿ 5 ನಿಮಿಷಗಳು ಹಾರುವಷ್ಟರಲ್ಲೇ ಸಾಗರಕ್ಕೆ ಬಿದ್ದು ಬಿರುಗಾಳಿಯಿಂದ ಎದ್ದ ಅಲೆಗಳಲ್ಲಿ ಸಿಕ್ಕಿಬಿದ್ದಿದ್ದರು. ಹೆಲಿಕಾಪ್ಟರ್ ತಕ್ಷಣವೇ ಕಾರ್ಯಾಚರಿಸಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆಂದು ಆಯೋಜಕರು ವರದಿಗಾರರಿಗೆ ತಿಳಿಸಿದರು.ಎಂಜಿನ್ ವೈಫಲ್ಯದಿಂದಾಗಿ ರೋಸಿ ಹಾರುತ್ತಿದ್ದ ರೆಕ್ಕೆಗಳು ನಿಷ್ಫಲವಾಗಿ ರೋಸಿ ಸಾಗರಕ್ಕೆ ಬಿದ್ದನೆಂದು ಅವರ ಆಯೋಜಕರು ಹೇಳಿದ್ದಾರೆ.

ರೋಸಿ ತಮ್ಮ ಪ್ಯಾರಾಚೂಟ್ ಬಿಚ್ಚಿಕೊಂಡು ನಿಯಂತ್ರಿತ ಶೈಲಿಯಲ್ಲಿ ನೀರಿನಲ್ಲಿ ಬಿದ್ದರೆಂದು ಅವರು ತಿಳಿಸಿದ್ದಾರೆ. ರೋಸಿ ಅವರು ಸ್ಥಳೀಯವಾಗಿ ನಿರ್ಮಿಸಲಾದ ತಮ್ಮ ವಿಮಾನವನ್ನು 2008 ಮೇನಲ್ಲಿ ಆಲ್ಪ್ಸ್ ಪರ್ವತದ ಮೇಲೆ ಹಾರಿ ಜಿನೆವಾ ಸರೋವರ ಮುಟ್ಟುವ ಮ‌ೂಲಕ ಸಾರ್ವಜನಿಕ ಪ್ರದರ್ಶನ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ