ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಪಮಾನ ತಡೆಗೆ ಅಮೆರಿಕ, ಚೀನಾ ಪ್ರಸ್ತಾವನೆಗೆ ಶ್ಲಾಘನೆ (Warming | Sarkozy | Manaus | Carbon)
Bookmark and Share Feedback Print
 
ಜಾಗತಿಕ ತಾಪಮಾನ ತಡೆಯುವ ಅಮೆರಿಕ ಮತ್ತು ಚೀನಾದ ಪ್ರಸ್ತಾವನೆಗಳು ತೀರಾ ಪ್ರೋತ್ಸಾಹದಾಯಕವಾಗಿದೆ ಎಂದು ಮನಾಸ್‌ನಲ್ಲಿ ನಡೆದ ಒಂದು ದಿನದ ಹವಾಮಾನ ಬದಲಾವಣೆ ಕುರಿತ ಸಭೆಯಲ್ಲಿ ಮಾತನಾಡುತ್ತಾ ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೊಜಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 2020ರೊಳಗೆ ಅಮೆರಿಕದ ಇಂಗಾಲ ಹೊರಸೂಸುವಿಕೆಯನ್ನು ಶೇ.17ರಷ್ಟು ತಗ್ಗಿಸುವ ಗುರಿಗಳನ್ನು ನಿಗದಿ ಮಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಧೈರ್ಯವನ್ನು ಅವರು ಶ್ಲಾಘಿಸಿದರು.ಡೆನ್ಮಾರ್ಕ್ ರಾಜಧಾನಿ ಕೊಫೆನ್‌ಹ್ಯಾಗನ್‌ನಲ್ಲಿ ಡಿ. 7-18ರವರೆಗೆ ಹವಾಮಾನ ಬದಲಾವಣೆ ಸಮಾವೇಶಕ್ಕೆ ಮುನ್ನ, ಜಾಗತಿಕ ತಾಪಮಾನ ತಡೆ ಮತ್ತು ಮಳೆಯಾಧಾರಿತ ಅರಣ್ಯ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ವಿವಿಧ ರಾಷ್ಟ್ರಗಳ ಅಧಿಕಾರಿಗಳ ಸಭೆ ಗುರಿ ಹೊಂದಿದೆ.

ಕೊಫೆನ್‌ಹೇಗನ್ ಸಭೆಯನ್ನು ಯಶಸ್ವಿಗೊಳಿಸಲು ಒಬಾಮಾ ಮತ್ತು ಚೀನಾ ನಾಯಕರ ಇತ್ತೀಚಿನ ಹೇಳಿಕೆಗಳು ಪ್ರೋತ್ಸಾಹದಾಯಕವಾಗಿದೆಯೆಂದು ಸಾರ್ಕೊಜಿ ತಿಳಿಸಿದರು. ಬೀಜಿಂಗ್ ಇಂಗಾಲದ ತೀವ್ರತೆಯನ್ನು 2005ರ ಮಟ್ಟದಿಂದ ಶೇ.40-45ರಷ್ಟು ಒಂದು ದಶಕದೊಳಗೆ ಕಡಿತ ಮಾಡಲು ಶಪಥ ತೊಟ್ಟಿದ್ದು, ತನ್ನ ಪ್ರಪ್ರಥಮ ಇಂಗಾಲ ಸೂಸುವಿಕೆ ಗುರಿಯನ್ನು ಕೋಷ್ಠಕದಲ್ಲಿ ಇರಿಸಿದೆ.

ವಿಶ್ವದ ಎರಡು ಅತೀ ದೊಡ್ಡ ಇಂಗಾಲ ಹೊರಸೂಸುವಿಕೆ ರಾಷ್ಟ್ರಗಳು ಮಾಲಿನ್ಯ ತಡೆಗೆ ಮಂಡಿಸಿರುವ ಪ್ರಸ್ತಾವನೆಗಳು ವಿಶ್ವಸಂಸ್ಥೆಯ ಹವಾಮಾನ ಕುರಿತ ಮಾತುಕತೆಗೆ ಜೀವ ತಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನಾಸ್, ತಾಪಮಾನ, ಚೀನಾ, ಅಮೆರಿಕ