ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ ಅಮೆರಿಕದ ರಹಸ್ಯ ಏಜೆಂಟ್ ಆಗಿದ್ದನೇ? (Headley | India | Agent | New Delhi)
Bookmark and Share Feedback Print
 
ಲಷ್ಕರೆ ತೊಯ್ಬಾದ ಮುಂಬೈ ದಾಳಿಯ ಸಂಚಿನಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿ ಅಮೆರಿಕ ಬಂಧಿಸಿರುವ ಡೇವಿಡ್ ಹೆಡ್ಲಿ ಅಮೆರಿಕದ ರಹಸ್ಯ ಏಜೆಂಟ್ ಆಗಿದ್ದು, ಬಳಿಕ ಲಷ್ಕರೆ ತೊಯ್ಬಾಗೆ ನೆರವಾಗಿ ಪಾತಕ ಲೋಕಕ್ಕೆ ಇಳಿದಿರುವ ಸಾಧ್ಯತೆ ಕುರಿತು ಭಾರತದ ತನಿಖೆದಾರರು ಎಚ್ಚೆತ್ತಿದ್ದಾರೆ.

ಪ್ರಮುಖ ದಿನಪತ್ರಿಕೆಯೊಂದರಲ್ಲಿ ಈ ಕುರಿತು ವರದಿ ಪ್ರಕಟವಾಗಿದ್ದು, ಅಮೆರಿಕದ ಗುಪ್ತಚರ ದಳವು ಡೇವಿಡ್ ಹೆಡ್ಲಿಯನ್ನು ಲಷ್ಕರೆ ತೊಯ್ಬಾದೊಳಕ್ಕೆ ನುಸುಳಿಸಲು ಬಹುಶಃ ಬಳಸಿಕೊಂಡಿರಬಹುದೆಂದು ವರದಿಯಾಗಿದೆ. ಒಂದು ಹಸಿರು ಕಣ್ಣು ಮತ್ತು ಒಂದು ನೀಲಿ ಕಣ್ಣಿನ ಹೆಡ್ಲಿ ಪಾಕಿಸ್ತಾನ ಮ‌ೂಲದವನಾಗಿದ್ದರಿಂದ ಅವನು ಆ ಕೆಲಸಕ್ಕೆ ಸೂಕ್ತವ್ಯಕ್ತಿಯಾಗಿದ್ದನೆಂದು ಅಮೆರಿಕ ಗುಪ್ತಚರ ಭಾವಿಸಿತ್ತು.

ಭಾರತದ ತನಿಖೆದಾರರಿಂದ ಹೆಡ್ಲಿಯನ್ನು ದೂರವಿಡಲು ಅಮೆರಿಕ ಅಧಿಕಾರಿಗಳ ಪ್ರಯತ್ನ ಕೂಡ ಈ ರೀತಿಯ ಸಂಶಯಕ್ಕೆ ಎಡೆಕಲ್ಪಿಸಿದೆ. ಭಾರತದ ತನಿಖೆದಾರರು ಹೆಡ್ಲಿ ತನಿಖೆ ನಡೆಸಲು ಅಮೆರಿಕಕ್ಕೆ ತೆರಳಿದರೂ ಕೂಡ ಅವರಿಗೆ ಹೆಡ್ಲಿ ತನಿಖೆಗೆ ಅನುಮತಿ ನಿರಾಕರಿಸಲಾಯಿತು.

ಮುಂಬೈನಲ್ಲಿ ಸೆಪ್ಟೆಂಬರ್ 2008ರ ದಾಳಿಯನ್ನು ತಡೆಯಬಹುದಾಗಿದ್ದ ಮಾಹಿತಿಯನ್ನು ಹೆಡ್ಲಿ ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ನೀಡುವ ಸಂಭವವಿತ್ತು. ಆದರೆ ಮ‌ೂಲಭೂತವಾದಿ ಶಕ್ತಿಗಳ ಪ್ರಭಾವ ಹೆಚ್ಚಿದ್ದರಿಂದ ಅವನು ಲಷ್ಕರ್‌ಗೆ ಬಳಿಕ ಸಂಪೂರ್ಣ ನಿಷ್ಠನಾದ. ಇದರಿಂದಾಗಿ ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ 26/11 ಮುಂಬೈ ದಾಳಿಯ ಬಗ್ಗೆ ಸುಳಿವು ಸಿಗಲಿಲ್ಲವೆನ್ನಲಾಗಿದೆ.ಹೆಡ್ಲಿ ಅಮೆರಿಕ ಗುಪ್ತಚರ ಅಧಿಕಾರಿಗಳ ಜತೆ ಹೆಡ್ಲಿಯ ನಂಟು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬಹಿರಂಗ ಮಾಡಿತ್ತು. 1998ರಲ್ಲಿ ಹೆಡ್ಲಿಗೆ ಪಾಕಿಸ್ತಾನದಿಂದ ಹೆರಾಯಿನ್ ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅವನ ಬಂಧನದ ಬಳಿಕ,ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾದ ಬಗ್ಗೆ ಮತ್ತು ಪಾಕಿಸ್ತಾನದ ಪೂರೈಕೆದಾರರ ಬಗ್ಗೆ ವಿಪುಲ ಮಾಹಿತಿ ನೀಡಿದ ಬಳಿಕ ಕೇವಲ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಹೆಡ್ಲಿ ಮಾದಕವಸ್ತು ಜಾರಿ ಆಡಳಿತಕ್ಕೆ ಬೇಹುಗಾರಿಕೆ ನಿಗಾ ಕಾರ್ಯಾಚರಣೆ ಕೈಗೊಳ್ಳಲು ಪಾಕಿಸ್ತಾನಕ್ಕೆ ತೆರಳಿದ್ದ.

ಅಮೆರಿಕದ ಗುಪ್ತಚರ ಏಜೆನ್ಸಿಗಳಿಗೆ ಸಹಾಯ ನೀಡುವ ಬದಲಿಗೆ ಅವನ ಮಾದಕವಸ್ತು ಸಾಗಣೆ ಅಪರಾಧಕ್ಕೆ ಕಡಿಮೆ ಶಿಕ್ಷೆ ನೀಡಿ ಬಂಧಮುಕ್ತಮಾಡಲಾಯಿತೆಂಬುದು ಇದರಿಂದ ಸ್ಪಷ್ಟವಾಗಿದೆ. ಆದರೆ ಲಷ್ಕರೆ ಸಿದ್ಧಾಂತಗಳ ಜತೆ ನಿಕಟ ಸಾಮೀಪ್ಯ ಹೊಂದಿದ್ದ ಹೆಡ್ಲಿ ಲಷ್ಕರೆ ಜತೆ ಸೇರಿಕೊಂಡಿದ್ದು ಕಥೆಗೆ ತಿರುವು ನೀಡಿತು. ಹಿಂದೊಮ್ಮೆ ಅಮೆರಿಕದ ಆಸ್ತಿಯಾಗಿದ್ದ ಹೆಡ್ಲಿ ಬಳಿಕ ಅಮೆರಿಕಕ್ಕೆ ಹೊರೆಯಾಗಿ ಪರಿಣಮಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವನು ನೀಡಿದ ತಪ್ಪೊಪ್ಪಿಗೆಯಲ್ಲಿ ತಿಳಿಸಿರುವಂತೆ ಅವನು 2006ರಲ್ಲಿ ಲಷ್ಕರೆಗೆ ಸೇರಿ, ಜಿಹಾದಿ ಸಂಘಟನೆಯ ಭಯೋತ್ಪಾದನೆ ಶಿಬಿರವೊಂದರಲ್ಲಿ ತರಬೇತಿ ಪಡೆದಿದ್ದ.
ಸಂಬಂಧಿತ ಮಾಹಿತಿ ಹುಡುಕಿ