ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೌನ ಮುರಿದ ಜರ್ದಾರಿಯಿಂದ ವಿರೋಧಿಗಳ ತರಾಟೆ (Pakistan | Zardari | Critics | Democracy)
Bookmark and Share Feedback Print
 
ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಗುರುವಾರ ಅಂತಿಮವಾಗಿ ತಮ್ಮ ಮೌನವನ್ನು ಮುರಿದು,ತಮ್ಮ ಟೀಕಾಕಾರರು ಮತ್ತು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡು,ಆಯ್ಕೆಯಾದ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆಯೆಂದು ಆರೋಪಿಸಿದ್ದಾರೆ.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಳಿತಪ್ಪಿಸಲು ಯತ್ನಿಸುವ ಶಕ್ತಿಗಳು ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಜರ್ದಾರಿ ಅವರು 43ನೇ ಸಂಸ್ಥಾಪನಾ ದಿನದಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಭೆಯನ್ನು ಉದ್ದೇಶಿಸಿ ಹೇಳಿದರು.

ಪಿಪಿಪಿ ಸಹ ಅದ್ಯಕ್ಷರೂ ಕೂಡ ಆಗಿರುವ ಜರ್ದಾರಿ, ಈ ಪಿತೂರಿಗಳನ್ನು ವಿಫಲಗೊಳಿಸುವುದಾಗಿ ಹೇಳಿದ್ದಾರೆ.ಜರ್ದಾರಿ ಸರ್ಕಾರವು ಅವರ ಮಿತ್ರಪಕ್ಷಗಳಿಂದ ಮತ್ತು ಪ್ರತಿಪಕ್ಷದಿಂದ ತೀವ್ರ ಒತ್ತಡ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜರ್ದಾರಿ ಅವರು ಕಗ್ಗಂಟಿನಲ್ಲಿ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ತಮ್ಮ ಮತ್ತು ಕೆಲವು ಸಂಗಡಿಗರ ವಿರುದ್ಧ ಭ್ರಷ್ಟಾಚಾರ ಆರೋಪಗಳಿಗೆ ಕ್ಷಮೆ ನೀಡುವ ವಿವಾದಾತ್ಮಕ ರಾಷ್ಟ್ರೀಯ ಸಾಮರಸ್ಯ ಆದೇಶಕ್ಕೆ ಸಂಸತ್ ಅನುಮೋದನೆ ಪಡೆಯದಿರಲು ನಿರ್ಧರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ