ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸದ್ದಾಂ ಪದಚ್ಯುತಿಗೆ ಬುಷ್, ಬ್ಲೇರ್ ಗುಪ್ತ ಒಪ್ಪಂದ (Blair | Bush | Britain | Iraq)
Bookmark and Share Feedback Print
 
ಇರಾಕ್ ಮೇಲೆ ದಾಳಿ ಮಾಡುವುದಕ್ಕೆ ಮುಂಚಿತವಾಗಿ ಒಂದು ವರ್ಷದ ಮುಂಚೆ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸಲು ಟೋನಿ ಬ್ಲೇರ್ ಮತ್ತು ಜಾರ್ಜ್ ಡಬ್ಲ್ಯು ಬುಷ್ ಗುಪ್ತ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ಉನ್ನತ ದರ್ಜೆಯ ಬ್ರಿಟನ್ ರಾಜತಾಂತ್ರಿಕರೊಬ್ಬರು ಬಹಿರಂಗ ಮಾಡಿದ್ದಾರೆ. ಇರಾಕ್ ಯುದ್ಧಕ್ಕೆ ಮುನ್ನ, ಅಮೆರಿಕಕ್ಕೆ ರಾಯಭಾರಿಯಾಗಿದ್ದ ಸರ್ ಕ್ರಿಸ್ಟೊಫರ್ ಮೆಯರ್ ಈ ವಿಷಯ ಬಹಿರಂಗಮಾಡಿದ್ದಾರೆ.

ಆಗಿನ ಬ್ರಿಟನ್ ಪ್ರಧಾನಿ ಮತ್ತು ಅಧ್ಯಕ್ಷ ಬುಷ್ ನಡುವೆ 2002ರ ಏಪ್ರಿಲ್‌ನಲ್ಲಿ ಬುಷ್ ಅವರ ಕ್ರಾಫರ್ಡ್ ರಾಂಚ್‌ನಲ್ಲಿ ನಡೆದ ಖಾಸಗಿ ಭೇಟಿಯೊಂದರಲ್ಲಿ ಇರಾಕ್ ಆಡಳಿತ ಬುಡಮೇಲು ಮಾಡುವ ಒಪ್ಪಂದಕ್ಕೆ ಸಹಿಹಾಕಲಾಯಿತು ಎಂದು ಮೆಯರ್ ಹೇಳಿದ್ದಾರೆ.

ಇದಾದ ಬಳಿಕ ಇರಾಕ್ ವಿರುದ್ಧ ಯುದ್ಧ ಸಾರಿದ ಅಮೆರಿಕ ನೇತೃತ್ವದ ಸೇನೆಯು ಸದ್ದಾಂ ಹುಸೇನ್ ಅವರನ್ನು ಹಿಡಿದು ಗಲ್ಲಿಗೇರಿಸುವ ಮ‌ೂಲಕ ಇರಾಕ್ ವಿರುದ್ಧ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ