ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾಮ‌ೂಹಿಕ ಆತ್ಮಹತ್ಯೆಗೆ ಯೋಜಿಸಿದ್ದ ಫೇಸ್‌ಬುಕ್ ಗ್ರೂಪ್ (Hong Kong | Mass suicide | Facebook)
Bookmark and Share Feedback Print
 
ಸಾಮ‌ೂಹಿಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಚೀನಾ ಭಾಷೆಯ ಫೇಸ್‌ಬುಕ್ ಸಮ‌ೂಹದ ಸಂಸ್ಥಾಪಕನನ್ನು ಪತ್ತೆಹಚ್ಚಲು ಹಾಂಕಾಂಗ್ ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದಾರೆ. ಡಿ.21ರಂದು ಫೇಸ್‌ಬುಕ್ ಗ್ರೂಪ್ ಸದಸ್ಯರು ಸಾಮ‌ೂಹಿಕ ಆತ್ಮಹತ್ಯೆಗೆ ಯೋಜಿಸಿದ್ದೇವೆಂದು ಹೇಳಿಕೊಂಡ ಬಳಿಕ ಪೊಲೀಸರು ಜಾಗೃತರಾಗಿದ್ದಾರೆ.

15 ದಿನಗಳ ಕೆಳಗೆ ಹಾಂಕಾಂಗ್ ಶಾಲೆಯ ಮೇಲ್ಛಾವಣಿಯಿಂದ 15 ವರ್ಷ ವಯಸ್ಸಿನ ಬಾಲೆಯೊಬ್ಬಳು ಹಾರಲು ಯತ್ನಿಸಿದಾಗ ಆಕೆಯ ಸ್ನೇಹಿತರು ತಡೆದ ಬಳಿಕ ಈ ಕುರಿತ ತನಿಖೆ ಆರಂಭವಾಗಿತ್ತು. 'ನಾನು ಆತ್ಮಹತ್ಯೆ ಅಭ್ಯಾಸ ಮಾಡಬೇಕು' ಎಂದು ಕರೆಯಲಾದ ಫೇಸ್‌ಬುಕ್ ಗ್ರೂಪ್‌ಗೆ ಸಹಿಹಾಕಿದ 190 ಜನರ ಗುಂಪಿನಲ್ಲಿ ಬಾಲಕಿ ಕೂಡ ಒಬ್ಬಳೆಂದು ಪೊಲೀಸರು ಪತ್ತೆಹಚ್ಚಿದ್ದರು.

ಜನಪ್ರಿಯ ಸೋಷಿಯಲ್ ನೆಟ್‌ವರ್ಕ್ ಸೈಟ್‌ನಿಂದ ಈ ಗ್ರೂಪನ್ನು ತೆಗೆಯಲಾಗಿದೆ. ಈ ಸಮ‌ೂಹದ ಸದಸ್ಯರು ಆತ್ಮಹತ್ಯೆಗೆ ಉತ್ತಮ ವಿಧಾನಗಳ ಬಗ್ಗೆ ಪರಸ್ಪರ ಹಂಚಿಕೊಂಡಿದ್ದರು ಮತ್ತು ಸಾಮ‌ೂಹಿಕ ಆತ್ಮಹತ್ಯೆಯಲ್ಲಿ ಭಾಗಿಯಾದಲು ಪರಸ್ಪರ ಪ್ರೇರೇಪಣೆ ನೀಡಿದ್ದರು.ಆತ್ಮಹತ್ಯೆಗೆ ಯತ್ನಿಸಿದ ಶಾಲಾಬಾಲಕಿಯನ್ನು ಸಂದರ್ಶಿಸಿದ ಸಾಮಾಜಿಕ ಕಾರ್ಯಕರ್ತನೊಬ್ಬ ಪೊಲೀಸರಿಗೆ ಎಚ್ಚರಿಸಿದ.

ಈ ತಂಡವನ್ನು ನಿಷೇಧಿಸಲಾಗಿದೆಯೆಂದು ಕೆಲವು ಸುದ್ದಿಪತ್ರಿಕೆಗಳು ವರದಿ ಮಾಡಿದ್ದು, ಆತ್ಮಾಹುತಿ ತಂಡ ಇನ್ನೂ ಕ್ರಿಯಾಶೀಲವಾಗಿದೆಯೆಂದು ಸದಸ್ಯರು ಹೇಳಿದ್ದಾಗಿ ಇನ್ನೂ ಕೆಲವು ಜನರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ