ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಂಹಗಳ ಜತೆ ಆಟವಾಡುವ ಅಂಜದ ಗಂಡು ಕೆವಿನ್ (South Africa | Kevin | Lions | Predators)
Bookmark and Share Feedback Print
 
ಗೇಟುಗಳು ತೆರೆಯುತ್ತಿದ್ದಂತೆ ಮ‌ೂರು ಗಂಡು ಸಿಂಹಗಳು ಕೆವಿನ್ ರಿಚರ್ಡ್‌ಸನ್ ಮೇಲರಗಿ ಅವನನ್ನು ಕೆಳಕ್ಕೆ ಉರುಳಿಸಿದವು. ಈ ದೃಶ್ಯದ ಚಿತ್ರೀಕರಣ ತೆಗೆಯುತ್ತಿದ್ದ ನಾವು ಬೇಲಿಯ ಹಿಂದೆ ಅಡಗಿಕೊಂಡೆವು. ದಕ್ಷಿಣ ಆಫ್ರಿಕದ ಸಿಂಹ ಸಂಗಾತಿ ಬದುಕು ಹಠಾತ್ , ರಕ್ತಸಿಕ್ತ ಅಂತ್ಯಗೊಳ್ಳುತ್ತದೆಂದು ನಾವು ಭಾವಿಸಿದ್ದೆವು.

ಮಾಂಸಾಹಾರಿ ಸಿಂಹಗಳು ಕೆವಿನ್ ರಿಚರ್ಡ್‌ಸನ್ ಅವರನ್ನು ಕೆಳಕ್ಕೆ ಉರುಳಿಸುತ್ತಿದ್ದಂತೆ ನಾನು ಆತಂಕಿತರಾಗಿ 'ಆರ್ ಯು ಓಕೆ' ಎಂದು ಕಿರುಚಿದೆ. ಚಿಂತಿಸಬೇಡಿ, ಇವೆಲ್ಲ ಸಹಜ ಎಂದು ಉದ್ಗರಿಸಿದ ಅವನು ಸಿಂಹವೊಂದು ತನ್ನ ಬೃಹತ್ತ ಪಂಜನ್ನು ತಲೆಯ ಮೇಲೆ ಚಾಚಿರುವಾಗಲೇ ನಗುತ್ತಾ ಹೇಳಿದ.
ದಕ್ಷಿಣ ಆಫ್ರಿಕಾದಲ್ಲಿ ಸಿಂಹಗಳನ್ನೇ ಸಂಗಾತಿ ಮಾಡಿಕೊಂಡು ಅವುಗಳ ಜತೆ ಆಟವಾಡುವ ಅಂಜದ ಗಂಡು ಕೆವಿನ್ ರಿಚರ್ಡ್‌ಸನ್. ಅವನು ಸಿಂಹಗಳನ್ನು ತಬ್ಬಿಕೊಂಡು ಮುತ್ತುನೀಡುತ್ತಾನೆ. ಅವುಗಳ ಮೈ ದಡವುತ್ತಾನೆ.

ನೀರಿನಲ್ಲಿ ಸಿಂಹಗಳ ಜತೆ ಆಟವಾಡುತ್ತಾನೆ. ಸಿಂಹಗಳು ಎಂಟೆದೆಯ ಬಂಟನ ಒಡನಾಟದಲ್ಲಿ ಮೈಮರೆಯುತ್ತವೆ. ಅವನ ಮೇಲೆ ಪ್ರೀತಿ, ಅಕ್ಕರೆ ತೋರಿಸುತ್ತವೆ. ಎರಡು ಸಿಂಹದ ಮರಿಗಳು ಸೆರೆಯಲ್ಲಿದ್ದಾಗ ತಮಗೆ ಅವುಗಳ ಜತೆ ಕಾಲಕಳೆಯುವ ಅವಕಾಶ ಸಿಕ್ಕಿತು. ಇದು ತಮ್ಮ ಜೀವನವನ್ನೇ ಬದಲಿಸುತ್ತದೆಂದು ಎಣಿಸಿರಲಿಲ್ಲ.ಈಗ ಅವರೆಡು ಸಿಂಹಗಳು ಬೆಳೆದು ನಿಂತಿವೆ ಎಂದು ಕೆವಿನ್ ಹೇಳುತ್ತಾರೆ.

ಜೋಹಾನ್ಸ್‌ಬರ್ಗ್ ಬಳಿ ಕೆವಿನ್ ಅವರ ಖಾಸಗಿ ಸಿಂಹಧಾಮದಲ್ಲಿ 38 ಸಿಂಹಗಳಿವೆ. ಅವುಗಳ ಜತೆ ಅವಿನಾಭಾವ ಸಂಬಂಧವನ್ನು ಅವನು ಬೆಳೆಸಿಕೊಂಡಿದ್ದಾನೆ.ಸಿಂಹಗಳ ಅಂತರಂಗ ಅರಿಯುವ ಅವನು ಅವುಗಳ ಕುಟುಂಬದಲ್ಲಿ ತಾನೂ ಒಂದಾಗಿದ್ದಾನೆ. ಸಿಂಹಗಳ ಜತೆ ರಿಚರ್ಡ್‌ಸನ್ ಆಟವಾಡುವ ವಿಡಿಯೊ ದೃಶ್ಯಗಳು ಗಂಡೆದೆಯರ ಮೈಯನ್ನೂ ನಡುಗಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ