ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್ ಬಿಕ್ಕಟ್ಟು: ಭಾರತವನ್ನು ಛೂ ಬಿಟ್ಟ ಅಮೆರಿಕ (Iran | Uranium | Jones | Nuclear)
Bookmark and Share Feedback Print
 
ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ಇರಾನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮುಂದುವರಿದಿದ್ದು, ಅದು ಕಡಿಮೆ ಸಂಸ್ಕರಿತ ಯುರೇನಿಯಂ ಸ್ವೀಕರಿಸುವ ಸಮಂಜಸ ಪ್ರಸ್ತಾವನೆ ಒಪ್ಪಿಕೊಳ್ಳಲು ಭಾರತ ತನ್ನ ಪ್ರಭಾವ ಬಳಸಬೇಕೆಂದು ಅಮೆರಿಕ ಸೂಚಿಸಿದೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅಮೆರಿಕ ರಾಷ್ಟ್ರೀಯ ಭದ್ರತೆ ಸಲಹೆಗಾರ ಜೇಮ್ಸ್ ಜೋನ್ಸ್, ಈ ವಿಷಯದ ಬಗ್ಗೆ ಯಾವುದೇ ಮುನ್ನಡೆಯನ್ನು ತಾವು ಸ್ವಾಗತಿಸುವುದಾಗಿ ಹೇಳಿದರು. ಇರಾನ್ ಜತೆ ಮಾತುಕತೆ ರಸ್ತೆಯ ಕೊನೆ ತಲುಪಿದೆಯೆಂದು ನಿರ್ಗಮಿಸುತ್ತಿರುವ ಐಎಇಎ ಮುಖ್ಯಸ್ಥ ಮೊಹಮದ್ ಎಲ್ ಬರಾರ್ಡಿ ತಿಳಿಸಿದ್ದು, ಅವರ ಹೇಳಿಕೆ ಮಹತ್ವ ಪಡೆದಿದೆ.

ಭಾರತ ಈ ಬಿಕ್ಕಟ್ಟಿನಲ್ಲಿ ಯಾವ ರೀತಿಯ ಪಾತ್ರ ವಹಿಸಬಹುದೆಂಬ ಪ್ರಶ್ನೆಗೆ, ರಚನಾತ್ಮಕ ಪಾತ್ರ ವಹಿಸಬಹುದೆಂದು ಜೋನ್ಸ್ ಪ್ರತಿಕ್ರಿಯಿಸಿದರು. ಇರಾನ್ ಕಡಿಮೆ ಸಂಸ್ಕರಿತ ಯುರೇನಿಯಂ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಭಾರತ ಮನವೊಲಿಬೇಕೆಂದು ಅವರು ತಿಳಿಸಿದರು. ಇರಾನ್ ತನ್ನಲ್ಲಿರುವ ಯುರೇನಿಯಂ ದಾಸ್ತಾನನ್ನು ದೇಶದ ಹೊರಕ್ಕೆ ಒಯ್ಯುವ ಅಗತ್ಯವಿರುವ ರಾಜಿ ಮಾಡಿಕೊಳ್ಳಲು ಅಮೆರಿಕ ಒತ್ತಡ ಹೇರುತ್ತಿದೆ.

ಯುರೇನಿಯಂನ್ನು ಇಂಧನವಾಗಿ ಸಂಸ್ಕರಿಸಿ ಅದನ್ನು ಶಾಂತಿಯುತ ಉದ್ದೇಶಕ್ಕೆ ಬಳಸಲಾಗುತ್ತದೆ. ಈ ಪ್ರಸ್ತಾವನೆಯುಬ್ರಿಟನ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ ಐದು ರಾಷ್ಟ್ರಗಳಿಗೆ ಸ್ವೀಕಾರಾರ್ಹವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇರಾನ್, ಯುರೇನಿಯಂ, ಜೋನ್ಸ್