ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೂಮಿಯಲ್ಲಿ ಅನ್ಯಜೀವಿಗಳು: ಕಾಲ್ಪನಿಕ ಕಥೆಯಲ್ಲ, ನಿಜ (London | Hollywood | Earth | Aliens)
Bookmark and Share Feedback Print
 
ಪರಕೀಯ ಜೀವಿಗಳು ಭೂಮಿಯಲ್ಲಿ ಅಸ್ತಿತ್ವದಲ್ಲಿದ್ದು, ತಾವು ಅವುಗಳ ಜತೆ ಸಂಪರ್ಕದಲ್ಲಿರುವುದಾಗಿ ಬಲ್ಗೇರಿಯ ವಿಜ್ಞಾನಿಗಳು ತಿಳಿಸಿದ್ದು, ಇದು ಇನ್ನೊಂದು ಹಾಲಿವುಡ್‌ ವಿಜ್ಞಾನ ಕಾಲ್ಪನಿಕ ಕಥಾವಸ್ತುವಿಗೆ ಸ್ಫೂರ್ತಿಯಾಗಬಹುದು. ಅನ್ಯ ಜೀವಿಗಳು ನಮ್ಮ ಸುತ್ತಮುತ್ತಲೂ ಆವರಿಸಿದ್ದು, ಎಲ್ಲ ಕಾಲದಲ್ಲೂ ನಮ್ಮನ್ನು ಗಮನಿಸುತ್ತಿವೆ ಎಂದು ಬಲ್ಗೇರಿಯ ಅಕಾಡೆಮಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪನಿರ್ದೇಶಕ ಲ್ಯಾಕೆಜಾರ್ ಫಿಲಿಪೋವ್ ತಿಳಿಸಿದ್ದಾರೆ.

ಪರಕೀಯ ಜೀವಿಗಳು ನಮ್ಮ ವೈರಿಗಳಲ್ಲ. ಅವು ನಮಗೆ ನೆರವು ನೀಡಲು ಬಯಸಿದ್ದರೂ, ನಾವು ಅವರ ಜತೆ ನೇರ ಸಂಪರ್ಕ ಸಾಧಿಸುವಷ್ಟು ಬೆಳವಣಿಗೆ ಹೊಂದಿಲ್ಲ ಎಂದು ಫಿಲಿಪೋವ್ ತಿಳಿಸಿದ್ದಾರೆ.ಮುಂದಿನ 10ರಿಂದ 15 ವರ್ಷಗಳಲ್ಲಿ ಮಾನವ ಜನಾಂಗ ಪರಕೀಯ ಶಕ್ತಿಗಳ ಜತೆ ನೇರ ಸಂಪರ್ಕ ಹೊಂದಬಹುದು. ಆದರೆ ರೇಡಿಯೋ ತರಂಗಗಳ ಮ‌ೂಲಕವಲ್ಲ, ಯೋಚನಾ ಶಕ್ತಿ ಮ‌ೂಲಕ ಅವುಗಳ ಜತೆ ಸಂಪರ್ಕ ಸಾಧಿಸಬಹುದು ಎಂದು ಅವರು ಹೇಳಿದ್ದಾರೆ.

ವಿಜ್ಞಾನಿಗಳು ಮುಂದಿಟ್ಟ 30 ಪ್ರಶ್ನೆಗಳಿಗೆ ಅನ್ಯಜೀವಿಗಳು ಪ್ರಸಕ್ತ ಉತ್ತರಿಸುತ್ತಿದೆ.ಅವರಿಗೆ ಕಳಿಸಿದ ಜಟಿಲ ಸಂಕೇತಗಳನ್ನು ಭೇದಿಸಲು ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಾರ್ಯೋನ್ಮುಖವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ