ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೈತಾನನಿಗೆ ಕಲ್ಲು ತೂರಿದ ಹಜ್ ಯಾತ್ರಿಗಳು (Haj| Mekka | Jamarath | Mina)
Bookmark and Share Feedback Print
 
ಸಾಂಪ್ರದಾಯಿಕ ಬಿಳಿಯ ನಿಲುವಂಗಿ ಧರಿಸಿದ್ದ ಲಕ್ಷಾಂತರ ಮುಸ್ಲಿಮರು ಸೌದಿಅರೇಬಿಯದ ಮೀನಾದಲ್ಲಿ ಹಜ್ ಯಾತ್ರೆಯ ಮ‌ೂರನೇ ದಿನದಂದು ಸೈತಾನನಿಗೆ ಕಲ್ಲು ಬೀರುವ ಪ್ರಕ್ರಿಯೆಯೊಂದಿಗೆ ವಾರ್ಷಿಕ ಮುಸ್ಲಿಂ ಹಜ್ ಯಾತ್ರೆ ಪರಾಕಾಷ್ಠೆ ತಲುಪಿದೆ. ಮುಸ್ಲಿಮರು ಪ್ರಾಣಿಗಳನ್ನು ಬಲಿಕೊಡುವ ಮ‌ೂಲಕ ವಿಶ್ವಾದ್ಯಂತ ಪವಿತ್ರ ದಿನವನ್ನು ಆಚರಿಸಿದರು.

ಮೆಕ್ಕಾದ ದೊಡ್ಡ ಮಸೀದಿಯಲ್ಲಿ ಮತ್ತು ಮದೀನಾದ ಪ್ರವಾದಿ ಮಸೀದಿಯಲ್ಲಿ ಈದ್ ಅಲ್-ಅಧಾ ಆಚರಿಸಿದರು ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.ಮೀನಾದಲ್ಲಿ ಮ‌ೂರು ಜಮಾರತ್ ಕಂಬಗಳಿಗೆ ಲಕ್ಷಾಂತರ ಯಾತ್ರಿಗಳು ಕಲ್ಲುಗಳನ್ನು ತೂರಿದರು. ತಮ್ಮ ಪುತ್ರ ಇಸ್ಮೈಲ್ ಬಲಿಕೊಡಬೇಕೆಂಬ ದೇವರ ಆದೇಶಗಳನ್ನು ಕಡೆಗಣಿಸಬೇಕೆಂದು ಮನವೊಲಿಸುವ ಸೈತಾನನ ಪ್ರಯತ್ನಗಳನ್ನು ಅಬ್ರಾಹಂನಿಂದ ಮ‌ೂರು ಬಾರಿ ನಿರಾಕರಣೆ ಸಂಕೇತವಾಗಿ ಕಂಬಗಳಿಗೆ ಕಲ್ಲು ತೂರುವ ಆಚರಣೆ ನಡೆಸಲಾಗುತ್ತಿದೆ.

ಕಲ್ಲು ಬೀರುವ ಆಚರಣೆ ಹಿಂದೆಯೇ ಪ್ರಾಣಿಗಳನ್ನು ಬಲಿಕೊಡುವ ಪ್ರಕ್ರಿಯೆ ನಡೆಯುತ್ತದೆ. ಅಬ್ರಾಹಂ ಸೈತಾvನ್ನು ಧಿಕ್ಕರಿಸಿ, ಅಲ್ಲಾ ಹೆಸರಿನಲ್ಲಿ ಇಸ್ಮೈಲ್ ಬಲಿಗೆ ಧಾವಿಸುತ್ತಿದ್ದಂತೆ ದೇವದೂತ ಗೆಬ್ರಾಲ್ ಮಧ್ಯಪ್ರವೇಶಿಸಿ, ಆದೇಶವನ್ನು ಹಿಂತೆಗೆದುಕೊಂಡು ಬದಲಿಗೆ ಟಗರೊಂದನ್ನು ಅಬ್ರಾಹಂಗೆ ಪೂರೈಸಿದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಜ್, ಮೆಕ್ಕಾ, ಜಮಾರತ್, ಮೀನಾ