ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಣ್ವಸ್ತ್ರಗಳ ಮೇಲಿನ ನಿಯಂತ್ರಣ ಗಿಲಾನಿಗೆ ಹಸ್ತಾಂತರ (Zardari | Gilani | Babar | Pakistan)
Bookmark and Share Feedback Print
 
ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ಪಾಕಿಸ್ತಾನ ಪರಮಾಣು ಅಸ್ತ್ರಗಳ ಮೇಲಿನ ನಿಯಂತ್ರಣವನ್ನು ಪ್ರಧಾನಮಂತ್ರಿ ಯ‌ೂಸುಫ್ ರಾಜಾ ಗಿಲಾನಿ ಅವರಿಗೆ ಹಸ್ತಾಂತರಿಸಿದ್ದು, ವರ್ಷಾಂತ್ಯದಲ್ಲಿ ಅಧ್ಯಕ್ಷರ ಇನ್ನಷ್ಟು ಅಧಿಕಾರಗಳನ್ನು ಕೈಬಿಡಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ.

ರಾಷ್ಟ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುವ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ ಅಧ್ಯಕ್ಷಗಿರಿಯನ್ನು ಸ್ವತಃ ತ್ಯಜಿಸಿದ ಜರ್ದಾರಿ, ಶುಕ್ರವಾರ ರಾತ್ರಿ ಆ ಅಧಿಕಾರಗಳನ್ನು ಪ್ರಧಾನಮಂತ್ರಿ ಅವರಿಗೆ ಹಸ್ತಾಂತರಿಸಿದರು. ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರ ಸುಗ್ರೀವಾಜ್ಞೆಯನ್ನು ಮರುಘೋಷಣೆಮಾಡಿ, ತಿದ್ದುಪಡಿ ಮಾಡುವ ಮ‌ೂಲಕ ಪರಮಾಣು ಅಸ್ತ್ರಗಳ ಮೇಲಿನ ತಮ್ಮ ನಿಯಂತ್ರಣವನ್ನು ಕೈಬಿಟ್ಟರು ಎಂದು ಅಧ್ಯಕ್ಷೀಯ ವಕ್ತಾರ ಫರಾತುಲ್ಲಾ ಬಾಬರ್ ತಿಳಿಸಿದ್ದಾರೆ.

ಆಯ್ಕೆಯಾದ ಸಂಸತ್ತು ಮತ್ತು ಪ್ರಧಾನಮಂತ್ರಿಗೆ ಪರಮಾಧಿಕಾರ ನೀಡುವ ನಿಟ್ಟಿನಲ್ಲಿ ಇದೊಂದು ದಾಪುಗಾಲು ಎಂದು ಬಾಬರ್ ವರ್ಣಿಸಿದ್ದಾರೆ. ಟಿವಿ ನ್ಯೂಸ್ ಚಾನೆಲ್ ಜತೆ ಮಾತನಾಡುತ್ತಿದ್ದ ಜರ್ದಾರಿ, ಅಧ್ಯಕ್ಷರಿಗೆ ನೀಡಲಾಗಿರುವ ಪ್ರಧಾನಮಂತ್ರಿಯನ್ನು ವಜಾ ಮಾಡುವ ಮತ್ತು ಸಂಸತ್ತನ್ನು ವಿಸರ್ಜಿಸುವ ಪರಮಾಧಿಕಾರವನ್ನು ಡಿಸೆಂಬರ್‌ನಲ್ಲಿ ರದ್ದುಮಾಡಲಾಗುವುದು ಎಂದು ನುಡಿದರು.

ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆದ ಬಳಿಕ ತಾಲಿಬಾನ್ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸಿ ಅಟ್ಟಹಾಸ ಮೆರೆದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಣ್ವಸ್ತ್ರ ಸುರಕ್ಷತೆಯ ಬಗ್ಗೆ ಅಂತಾರಾಷ್ಟ್ರೀಯವಾಗಿ ತೀವ್ರ ಕಳವಳ ವ್ಯಕ್ತವಾಗಿತ್ತು. ಅಣ್ವಸ್ತ್ರಗಳು ತಾಲಿಬಾನಿಗಳ ಕೈವಶವಾದರೆ ಭಾರೀ ಅನಾಹುತಕ್ಕೆ ಕಾರಣವಾಗಬಹುದು ಎನ್ನುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ವಸ್ತ್ರಗಳ ಸಂಪೂರ್ಣ ಸುರಕ್ಷತೆ ಸಲುವಾಗಿ ಅವುಗಳ ಮೇಲಿನ ನಿಯಂತ್ರಣವನ್ನು ಗಿಲಾನಿಗೆ ವಹಿಸಿರಬಹುದೆಂದು ಭಾವಿಸಲಾಗಿದೆ.

ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸ್ಥಾಪಕ ಜುಲ್ಫೀಕರ್ ಆಲಿ ಭುಟ್ಟೊ ಅವರ ಅಧಿಕಾರಾವಧಿಯಲ್ಲಿ ರೂಪಿಸಲಾದ ಸಂವಿಧಾನವನ್ನು ಉಲ್ಲೇಖಿಸಿ, ಸರ್ವಾನುಮತದ ನಿರ್ಣಯದ ಮ‌ೂಲಕ 17ನೇ ತಿದ್ದುಪಡಿಯನ್ನು ರದ್ದುಮಾಡುವುದಾಗಿ ಜರ್ದಾರಿ ತಿಳಿಸಿದ್ದರು. ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರವನ್ನು ಮಾಜಿ ಮಿಲಿಟರಿ ಆಡಳಿತಗಾರ ಮುಷರೆಫ್ ಸ್ಥಾಪಿಸಿದ್ದು, 17ನೇ ಸಂವಿಧಾನ ತಿದ್ದುಪಡಿಗೆ ಅನುಮೋದನೆ ನೀಡಿ ಪರಮಾಧಿಕಾರ ಹೊಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ