ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 5ನೇ ಬೇಹುಗಾರಿಕೆ ಉಪಗ್ರಹ ಜಪಾನ್ ಪ್ರಯೋಗ (Japan | Spy | Satellite | North Korea)
Bookmark and Share Feedback Print
 
ಸ್ವತಂತ್ರವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸುವ ದಿಸೆಯಲ್ಲಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜಪಾನ್ ತನ್ನ ಐದನೇ ಬೇಹುಗಾರಿಕೆ ಉಪಗ್ರಹವನ್ನು ಶನಿವಾರ ಪ್ರಯೋಗಿಸಿದೆ. ದೇಶೀಯವಾಗಿ ಅಭಿವೃದ್ಧಿಯಾದ, ಅಮೆರಿಕದ 565 ದಶಲಕ್ಷ ಡಾಲರ್ ಉಪಗ್ರಹವನ್ನು ಒಯ್ಯುತ್ತಿದ್ದ ಉಪಗ್ರಹವನ್ನು ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾಯಿತು ಎಂದು ಕ್ಯಾಬಿನೆಟ್ ಕಚೇರಿಯ ಅಧಿಕಾರಿ ಹಿಸಾಶಿ ಮಿಚಿಗಾಮಿ ಹೇಳಿದ್ದಾರೆ.

ನಮ್ಮ ರಕ್ಷಣೆ ಮತ್ತು ರಾಜತಾಂತ್ರಿಕ ಉದ್ದೇಶಗಳಿಗಾಗಿ ಉಪಗ್ರಹವು ಗೋಪ್ಯ ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಅವರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿಗಳಿಗಾಗಿ ಜಪಾನ್ ದೀರ್ಘಕಾಲ ಅಮೆರಿಕದ ಮೇಲೆ ಅವಲಂಬಿತವಾಗಿತ್ತು. ಆದರೆ 2003ರಲ್ಲಿ ಬೇಹುಗಾರಿಕೆ ಉಪಗ್ರಹಗಳ ಮೊದಲನೇ ಜೋಡಿಯನ್ನು ಜಪಾನ್ ಪ್ರಯೋಗಿಸಿತು.

ಉತ್ತರ ಕೊರಿಯ 1998ರಲ್ಲಿ ಜಪಾನ್ ಮೇಲೆ ಕ್ಷಿಪಣಿಯೊಂದನ್ನು ಪ್ರಯೋಗಿಸುವ ಮ‌ೂಲಕ ಟೋಕಿಯೊಗೆ ಆಘಾತ ನೀಡಿತ್ತು. ಜಪಾನ್ ಮುಖ್ಯವಾಗಿ ಉತ್ತರಕೊರಿಯದ ಬೆಳವಣಿಗೆಗಳ ಬಗ್ಗೆ ನಿಗಾವಹಿಸಲು ಬೇಹುಗಾರಿಕೆ ಉಪಗ್ರಹಗಳನ್ನು ಹಾರಿಸುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಉತ್ತರ ಕೊರಿಯದ ದೂರಗಾಮಿ ರಾಕೆಟ್ ಜಪಾನ್ ಮೇಲೆ ಹಾರಿ ಪೆಸಿಫಿಕ್ ಸಾಗರದಲ್ಲಿ ಬಿದ್ದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಪಾನ್, ಬೇಹುಗಾರಿಕೆ, ಗೋಪ್ಯ