ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹವಾಮಾನ: ಫ್ರಾನ್ಸ್, ಬ್ರಿಟನ್ ಜತೆ ಪ್ರಧಾನಿ ಚರ್ಚೆ (Copenhagen | Climate | Singh | Sarkozy)
Bookmark and Share Feedback Print
 
ಹವಾಮಾನ ಬದಲಾವಣೆ ಕುರಿತ ಕೋಫನ್‌ಹ್ಯಾಗನ್ ಶೃಂಗಸಭೆ ಯಶಸ್ಸಿನ ಖಾತರಿಗೆ ದಾರಿಗಳನ್ನು ಹುಡುಕುವ ಬಗ್ಗೆ ಭಾರತವು ಶುಕ್ರವಾರ ಫ್ರಾನ್ಸ್ ಮತ್ತು ಬ್ರಿಟನ್ ಜತೆ ಮಾತುಕತೆ ನಡೆಸಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಮತ್ತು ಬ್ರಿಟನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಅವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದರು.

ಸಾರ್ಕೋಜಿ ಮತ್ತು ಬ್ರೌನ್ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಸಿಂಗ್ ಅವರು, ಕೋಫೆನ್‌ಹ್ಯಾಗನ್ ಸಭೆಯಲ್ಲಿ ಭಾರತ ಪ್ರಮುಖ ಪಾಲು ಹೊಂದಿದ್ದು, ಸಮತೋಲಿತ, ಮಹತ್ವಾಕಾಂಕ್ಷೆಯ ಮತ್ತು ಸಮಾನತೆಯ ಫಲಿತಾಂಶವನ್ನು ನೋಡಲು ಬಯಸುತ್ತೇವೆ ಎಂದು ಹೇಳಿದರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯ ವಿರುದ್ಧ ಹೋರಾಡಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಖ್ಯವಾಗಿ ಅಗತ್ಯವಾದ ಸೂಕ್ತ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳನ್ನು ವರ್ಗಾಯಿಸುವ ಬಗ್ಗೆ ಸಿಂಗ್ ಒತ್ತಿಹೇಳಿದರು. ಅಮೆರಿಕದ ಇಂಗಾಲದ ಹೊಸಸೂಸುವಿಕೆ ಶೇ.20ರಷ್ಟಿದ್ದರೆ, ಚೀನಾ ಶೇ.16 ಮತ್ತು ಭಾರತ ಶೇ. 4ರಷ್ಟು ಹೊರಸೂಸುತ್ತಿದೆ.

ಹೀಗಾಗಿ ಭಾರತದ ಮೇಲೆ ಬೇರೆಲ್ಲ ದೇಶಗಳಿಗೆ ಸಮಾನವಾಗಿ ಇಂಗಾಲ ಹೊರಸೂಸುವಿಕೆ ಕಡಿತಕ್ಕೆ ಕಟ್ಟುಪಾಡು ವಿಧಿಸುವುದು ಸರಿಯಲ್ಲ ಎಂದು ಇದಕ್ಕೆ ಮುಂಚೆ ಭಾರತ ಪ್ರತಿಪಾದಿಸಿತ್ತು. ಹವಾಮಾನ ವೈಪರೀತ್ಯದಿಂದ ಭಾರತ ತೀವ್ರ ಹಾನಿಗೀಡಾದ ದೇಶಗಳಲ್ಲಿ ಒಂದಾಗಿದೆಯೆಂದು ಹೇಳಿದ ಸಿಂಗ್, ತಮ್ಮ ಸರ್ಕಾರ ರಾಷ್ಟ್ರೀಯ ಕಾರ್ಯಯೋಜನೆಯ ಮ‌ೂಲಕ ಕೈಗೊಂಡ ಏಕಪಕ್ಷೀಯ ಕ್ರಮಗಳ ಬಗ್ಗೆ ಸಾರ್ಕೋಜಿ ಮತ್ತು ಬ್ರೌನ್ ಅವರಿಗೆ ಮನದಟ್ಟು ಮಾಡಿದ್ದಾರೆ.

ಸೌರಶಕ್ತಿ ಮುಂತಾದ ನವೀಕೃತ ಇಂಧನಕ್ಕೆ ಭಾರತ ಹೆಚ್ಚು ಒತ್ತುನೀಡುತ್ತಿದೆಯೆಂದು ಹೇಳಿದ ಸಿಂಗ್ ಅವರು,ಹವಾಮಾನ ಬದಲಾವಣೆ ನಿಭಾಯಿಸಲು ವಿವಿಧ ರಾಷ್ಟ್ರಗಳಿಂದ ಅನೇಕ ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು,ಅವುಗಳ ಪರಿಶೀಲನೆ ನಡೆಸುತ್ತಿರುವುದಾಗಿ ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ