ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ 39 ಸಾವು (Russian | Bomb | Train | Nevsky)
Bookmark and Share Feedback Print
 
ರಷ್ಯಾದ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಹಳಿತಪ್ಪಿ ಕನಿಷ್ಠ 39 ಜನರು ಸತ್ತಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಸ್ಕೊದಿಂದ ಸೇಂಟ್ ಪೀಟರ್ಸ್‌ಬರ್ಗ್ ಕಡೆಗೆ 661 ಪ್ರಯಾಣಿಕರನ್ನು ಒಯ್ಯುತ್ತಿದ್ದ ನೆವ್ಸ್ಕಿ ಎಕ್ಸ್‌ಪ್ರೆಸ್ 9.34 ಗಂಟೆಗೆ ಉಗ್ಲೋವ್‌ಕಾ ಬಳಿ ಹಳಿತಪ್ಪಿದೆ. ಈ ಘಟನೆಯನ್ನು ಬಾಂಬ್ ದಾಳಿ ಇರಬಹುದೆಂದು ರಾಷ್ಟ್ರೀಯ ರೈಲ್ವೆ ಕಂಪೆನಿ ಶಂಕಿಸಿದೆ.

ರಕ್ಷಣಾ ಕಾರ್ಯಕರ್ತರು ನಜ್ಜುಗುಜ್ಜಾದ ಬೋಗಿಗಳನ್ನು ಕತ್ತರಿಸಿ ಬದುಕುಳಿದವರನ್ನು ಪಾರುಮಾಡಲು ಪ್ರಯತ್ನಿಸಿದರು.ಸ್ಪೋಟಕ ವಸ್ತುವಿನ ಸಿಡಿತವೇ ನೆವ್‌ಸ್ಕಿ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಕಾರಣವೆಂಬುದಕ್ಕೆ ವಸ್ತುನಿಷ್ಠ ಸಾಕ್ಷ್ಯಾಧಾರವಿದೆಯೆಂದು ರಷ್ಯಾ ರೈಲ್ವೆ ಮುಖ್ಯಸ್ಥ ವ್ಲಾಡಿಮಿರ್ ಯಾಕುನಿನ್ ತಿಳಿಸಿದರು.

ಸುಮಾರು 25 ಜನರು ಸತ್ತಿರುವುದು ದೃಢಪಟ್ಟಿದ್ದು, 18 ಜನರ ಲೆಕ್ಕ ಸಿಗದಿರುವುದರಿಂದ ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಷ್ಯಾ, ಉಗ್ಲೋವ್ಕಾ, ಬಾಂಬ್ ದಾಳಿ