ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಹೆಡ್ಲಿ-ರಾಣಾರನ್ನು ಪ್ರಶ್ನಿಸುವಂತಿಲ್ಲ: ಅಮೆರಿಕ (FBI | Headley | Rana | 26/11 attacks | Washington)
Bookmark and Share Feedback Print
 
ಭಾರತದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ ಆರೋಪದಲ್ಲಿ ಬಂಧಿತರಾದ ಅಮೆರಿಕದ ಪ್ರಜೆಯಾದ ಡೇವಿಡ್ ಹೆಡ್ಲಿ ಮತ್ತು ರಾಣಾನನ್ನು ಹೆಚ್ಚಿನ ಪ್ರಶ್ನೆಗೊಳಪಡಿಸಬಾರದು ಎಂದು ಅಮೆರಿಕ ತಾಕೀತು ಮಾಡಿದೆ.

ಬಂಧಿತ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ, ಅದಕ್ಕೂ ಕಾನೂನಿನ ಮಿತಿಗಳಿವೆ. ಅದುದರಿಂದ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸುವಂತಿಲ್ಲ ಎಂದು ಅಮೆರಿಕ ಹೇಳಿಕೆ ನೀಡಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಮ್ಸ್ ಜೋನ್ಸ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಇವರಿಬ್ಬರೂ ಪ್ರಸ್ತುತ ಪ್ರಕರಣದ ಬಗ್ಗೆ ತಮ್ಮ ವೈಯಕ್ತಿಕ ಒಲವು ವ್ಯಕ್ತಪಡಿಸಿದ್ದು ಈ ಬಗ್ಗೆ ಇವರಿಬ್ಬರೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ಅಮೆರಿಕ ಮೂಲದ ಹೆಡ್ಲಿ ಮತ್ತು ಕೆನಡಾ ಮೂಲದ ರಾಣಾ ಅವರನ್ನು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಎಫ್‌ಬಿಐ ಕಳೆದ ತಿಂಗಳು ಇವರನ್ನು ಬಂಧಿಸಿತ್ತು. ಪ್ರಸ್ತುತ ಪ್ರಕರಣದ ಬೆಳವಣಿಗೆಯ ಬಗ್ಗೆ ಅಮೆರಿಕದ ಅಧ್ಯಕ್ಷರು ಮತ್ತು ಪ್ರಧಾನಿ ಸಿಂಗ್ ಮಾತುಕತೆ ನಡೆಸಿದ್ದು, ಈ ಮಾತುಕತೆ ನಂತರ ಇಬ್ಬರೂ ಸಂತುಷ್ಟರಾಗಿರುವಂತೆ ಕಂಡುಬಂತು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ಜೋನ್ಸ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ