ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಕಾದಲ್ಲಿ ಎಚ್‌1ಎನ್‌1ಗೆ ನಾಲ್ಕು ಮಂದಿ ಬಲಿ (Mecca | Dubai | H1N1 | India | Pakistan)
Bookmark and Share Feedback Print
 
ಇಲ್ಲಿನ ಪವಿತ್ರ ಮೆಕ್ಕಾ ಯಾತ್ರೆಗೆ ಬಂದಿರುವ ತೀರ್ಥಯಾತ್ರಿಕನೊಬ್ಬ ಎಚ್‌1ಎನ್‌1 ಸೋಂಕಿನಿಂದ ಸಾವನ್ನಪ್ಪಿದ್ದು, ಅಲ್ಲಿನ ಲಕ್ಷಾಂತರ ಯಾತ್ರಿಗಳಲ್ಲಿ ತೀವ್ರ ಭೀತಿ ಮೂಡಿಸಿದೆ. ಪಾಕಿಸ್ತಾನದಿಂದ ಬಂದಿರುವ 70ವರ್ಷ ವಯಸ್ಸಿನ ಯಾತ್ರಿ ಎಚ್‌1ಎನ್‌1ನಿಂದ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಜ್ ಯಾತ್ರೆ ಬುಧವಾರದಿಂದ ಪ್ರಾರಂಭವಾದ ದಿನದಿಂದ ಎಚ್‌1ಎನ್‌1ಗೆ 4ಮಂದಿ ಸಾವನ್ನಪ್ಪಿರುವುದಾಗಿ ಸೌದಿ ಅರೇಬಿಯಾ ವರದಿ ತಿಳಿಸಿದೆ. ಪ್ರತಿವರ್ಷ ಹಜ್ ಪ್ರಯುಕ್ತ ಮೆಕ್ಕಾದಲ್ಲಿ30ಲಕ್ಷ ಮಂದಿ ಸೇರುತ್ತಾರೆ.

ವಿಶ್ವದ ಬೇರೆ, ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಹೋಗುವ ಯಾತ್ರಾರ್ಥಿಗಳಿಂದ ಹಂದಿಜ್ವರ ಬರಬಹುದು ಎಂಬ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಕೂಡ ಎಚ್‌1ಎನ್‌1ಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ