ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿಗೂ, ಗಿಲಾನಿಗೂ ಸಂಬಂಧದ ಸುತ್ತ ಅನುಮಾನದ ಹುತ್ತ (Pakistan | Gilani | Headley | Islamabad)
Bookmark and Share Feedback Print
 
ಅಮೆರಿಕದಲ್ಲಿ ಬಂಧಿತನಾಗಿರುವ ಭಯೋತ್ಪಾದಕ ಶಂಕಿತ ಡೇವಿಡ್ ಕೋಲ್ಮನ್ ಹೆಡ್ಲಿ ತಮ್ಮ ಮಲಸಹೋದರ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಗಿಲಾನಿ ಅವರ ಪಿಆರ್‌ಒ ತಿಳಿಸಿದ್ದಾರೆ. ಆದರೆ ಗಿಲಾನಿ ಜತೆ ಹೆಡ್ಲಿ ಕುಟುಂಬಕ್ಕೆ ಯಾವುದೇ ಸಂಬಂಧವಿದೆಯೆಂಬ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಮತ್ತು ಬಂಧಿತ ಅಮೆರಿಕ ಭಯೋತ್ಪಾದಕ ಶಂಕಿತ ಮತ್ತು ತಮ್ಮ ಮಲಸಹೋದರ ದಾವೂದ್ ಗಿಲಾನಿ ಅಲಿಯಾಸ್ ಡೇವಿಡ್ ಕೋಲ್ಮನ್ ಹೆಡ್ಲಿ ಜತೆ ಸಂಬಂಧ ಹೆಣೆಯಲು ಭಾರತದ ಮಾಧ್ಯಮಗಳು ಯತ್ನಿಸುತ್ತಿದೆಯೆಂದು ಸಾರ್ವಜನಿಕ ಸಂಪರ್ಕಾಧಿಕಾರಿ ದಾನ್ಯಾಲ್ ಗಿಲಾನಿ ತಿಳಿಸಿದರು. ಇದು ಸಂಪೂರ್ಣ ನಿರಾಧಾರ ಮತ್ತು ಅಸತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವರದಿಯು ಊಹಾಪೋಹವನ್ನು ಆಧರಿಸಿದ್ದು, ಅನಗತ್ಯ ಕುತೂಹಲ ಸೃಷ್ಟಿಸುವ ಉದ್ದೇಶದಿಂದ ಕೂಡಿದೆಯೆಂದು ಅವರು ಹೇಳಿದರು. ತಮ್ಮ ಪೂರ್ವಿಕರು ಭಾರತದ ಪಂಜಾಬ್ ರಾಜ್ಯದ ಜಸ್ಟಾ‌ರ್‌ವಾಲ್‌ ಮತ್ತು ಉತ್ತರಪ್ರದೇಶದ ಎಟಾವಾದಿಂದ ವಲಸೆ ಬಂದಿದ್ದು, ಪ್ರಧಾನಮಂತ್ರಿಗಳ ಕುಟುಂಬವು ಶತಮಾನಗಳ ಕಾಲದಿಂದ ಮುಲ್ತಾನ್‌ನಲ್ಲಿ ವಾಸಿಸುತ್ತಿದ್ದು, ಎರಡು ಕುಟುಂಬಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಾವೂದ್ ಅಥವಾ ಹೆಡ್ಲಿ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದ ಅವರು, ಹೆಡ್ಲಿ ಜೀವನದ ಒಂದು ಹಂತದಲ್ಲಿ ಹೆಸರು ಬದಲಾಯಿಸಿಕೊಂಡಿದ್ದು ತಮಗೆ ಆಶ್ಚರ್ಯ ಉಂಟುಮಾಡಿದೆ. 2002ರಿಂದೀಚೆಗೆ ದಾವೂದ್ ಜತೆ ಸಂಪರ್ಕವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಹೆಡ್ಲಿ, ಗಿಲಾನಿ